ವಿಟ್ಲ: ಇಬ್ಬರು ಐಟಿಐ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿ ಚೂರಿ ಇರಿತಗೊಂಡ ಘಟನೆ ವಿಟ್ಲದ ಐಟಿಐ ತರಗತಿ ಒಳಗಡೆ ಸಂಭವಿಸಿದೆ.
ಚೂರಿ ಇರಿತದಿಂದ ಪುತ್ತೂರು ಬನ್ನೂರು ನಿವಾಸಿ ಮಹಮ್ಮದ್ ರಿಯಾನ್(18) ಮತ್ತು ಮಂಜೇಶ್ವರ ದೈಗೋಳಿ ನಿವಾಸಿ ಯಜೇಶ್ ಎಂಬವರು ಗಾಯಗೊಂಡಿದ್ದು, ವಿಟ್ಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಥಮ ವರ್ಷದ ಎಲೆಕ್ನಿಷಿಯನ್ ಐಟಿಐ ಕಲಿಯುತ್ತಿರುವ ಮಹಮ್ಮದ್ ರಿಯಾನ್ ಮತ್ತು ವಿಟ್ಲ ನಿವಾಸಿ ಹೇಮಂತ್ ಎಂಬವರ ನಡುವೆ ಜಗಳ ಉಂಟಾಗಿತ್ತು. ಅದನ್ನು ತಡೆಯಲು ಬಂದ ಮತ್ತೋರ್ವ ವಿದ್ಯಾರ್ಥಿ ಯಜೇಶ್ ಗೂ ಗಾಯವಾಗಿದೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

























