ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು ಭಾಗವಹಿಸಿದ್ದ ಸಂದರ್ಭದಲ್ಲಿ ಅವರು ಕುಸಿದು ಬಿದ್ದಿದ್ದರು.
ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತಂದರಾದರೂ ಆವಾಗಲೇ ಅವರು ಮೃತರಾಗಿದ್ದರು ಎನ್ನಲಾಗಿದೆ. ಮೃತ ರವಿ ಕಲ್ಕಾರ್ ರವರು ಪುತ್ತೂರು ತಾಲೂಕು ಬಿಲ್ಲವ ಸಂಘದ ವಿದ್ಯಾನಿಧಿ ಸಂಚಾಲಕರಾಗಿ, ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಯುವವಾಹಿನಿ ಪುತ್ತೂರು ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ, ಕೂಡುರಸ್ತೆ ಮುಂಡೋಡಿ ನವಶಕ್ತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಸದಸ್ಯರಾಗಿ ಹೀಗೆ ಹಲವು ಸಂಘಟನೆಗಳಲ್ಲಿ ಸೇವೆಗೈಯ್ಯುವ ಮೂಲಕ ಗುರುತಿಸಿಕೊಂಡಿದ್ದರು.
ಮೃತರು ಕೆಪಿಟಿಸಿಎಲ್(ಕೆಇಬಿ) ಇದರಲ್ಲಿ ಕಿರಿಯ ಅಭಿಯಂತರರಾದ ಪವಿತ್ರ, ಪುತ್ರಿ ರನ್ವಿ, ಪುತ್ರ ರವೀಶ್, ಸಹೋದರ ದಿನೇಶ್ ಕಲ್ಕಾರ್, ಸಹೋದರಿಯರನ್ನು ಅಗಲಿದ್ದಾರೆ.


























