ಸುಳ್ಯ: ಸೋಣಂಗೇರಿಯ ವ್ಯಕ್ತಿಗಳು ಹಳೆಗೇಟು ರಸ್ತೆ ಬದಿಯಲ್ಲಿ ಪರಸ್ಪರ ಹೊಡೆದಾಡಿಕೊಂಡು ಕತ್ತಿಯಿಂದ ಹಲ್ಲೆ ಮಾಡಿಕೊಂಡ ಘಟನೆ ಫೆ. 15ರಂದು ರಾತ್ರಿ ವರದಿಯಾಗಿದೆ.
ಹಲ್ಲೆ ಮಾಡಿಕೊಂಡಿರುವ ವ್ಯಕ್ತಿಗಳು ಸೋಣಗೇರಿಯ ಮಾಧವ, ಮತ್ತೊಂದು ತಂಡದಿಂದ ವೆಂಕಪ್ಪ ಹಾಗೂ ಪ್ರವೀಣ ಎಂದು ತಿಳಿದುಬಂದಿದೆ.
ಈ ಹಿಂದೆ ಯಾವುದೋ ವಿಷಯಕ್ಕೋಸ್ಕರ ಅವರಲ್ಲಿ ಪರಸ್ಪರ ಮಾತುಗಳು ನಡೆದು ವೈಮನಸ್ಸು ಉಂಟಾಗಿತ್ತು. ಈ ವಿಷಯದ ಕುರಿತು ಮತ್ತೆ ನಿನ್ನ ರಾತ್ರಿ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪರಿಣಾಮ ಮಾಧವ ಎಂಬುವರಿಗೆ ಕಾಲು ಮತ್ತು ಕೈಗೆ ಪೆಟ್ಟು ಬಿದ್ದಿದ್ದು, ಪ್ರವೀಣ ಎಂಬುವರ ತಲೆಗೆ ಗಾಯವಾಗಿ ವೆಂಕಪ್ಪ ಎಂಬುವವರಿಗೂ ಗಾಯಗಳಾಗಿವೆ. ಇತ್ತಂಡದವರೂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಪಟ್ಟಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

























