ಬೆಳ್ಳಾರೆ: ಕಫ ಹಾಗೂ ಉಸಿರಾಟದ ಸಮಸ್ಯೆಯಿಂದ ಎರಡು ತಿಂಗಳ ಹೆಣ್ಣು ಮಗು ಮೃತಪಟ್ಟಿರುವ ಘಟನೆ ಬೆಳ್ಳಾರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಕಲ್ಮಡ್ಕ ಗ್ರಾಮದ ಬೊಳಿಯೂರು ಪುರುಷೋತ್ತಮ ಮತ್ತು ಸುಮಿತ್ರಾ ದಂಪತಿಯ 2 ತಿಂಗಳ ಪುತ್ರಿ ಧೃತಿ ಮೃತಪಟ್ಟಿರುವ ಶಿಶು.
ಹುಟ್ಟಿನಿಂದಲೇ ಕಫ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗುವಿಗೆ ಫೆ.13ರಂದು ಕಫ ಮತ್ತು ಉಸಿರಾಟದ ಸಮಸ್ಯೆ ಉಲ್ಬಣಗೊಂಡಿತು. ಬಳಿಕ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದು ಕೊಂಡು ಬಂದ ವೇಳೆ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದರು. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























