ಪುತ್ತೂರು:ಗಂಡ ಹಲ್ಲೆ ನಡೆಸಿದ್ದಾಗಿ ಆರೋಪಿಸಿ ಖಾಸಗಿ ಕಾಲೇಜಿನ ಉಪನ್ಯಾಸಕಿಯೊಬ್ಬರು ಪುತ್ತೂರು ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ.
‘ಮನೋಜ್ ಎಂಬವರ ಜೊತೆ ನನ್ನ ಮದುವೆಯಾಗಿ 16 ವರ್ಷ ಆಗಿದೆ. 9ನೇ ತರಗತಿಯಲ್ಲಿರುವ ಮಗನೂ ಇದ್ದಾನೆ. ಗಂಡ ಮನೋಜ್ ನನಗೆ ನಿರಂತರ ಮಾನಸಿಕ ಕಿರುಕುಳ ನೀಡತ್ತಿದ್ದು,ಫೆ. 25ರ ಬೆಳಗ್ಗೆ ನನಗೆ ಹಲ್ಲೆ ನಡೆಸಿದ್ದಾರೆ’ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳಾ ಠಾಣೆ ಪೊಲೀಸರು ಗಾಯಾಳುವಿನಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
























