ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 16/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 309(4) ಅಡಿಯಲ್ಲಿ ದಾಖಲಾಗಿರುವ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಿತ ಆರೋಪಿತನ ಮುಖಚಹರೆ ಪತ್ತೆಯಾಗಿದೆ.
ಸದರಿ ವ್ಯಕ್ತಿಯ ಗುರುತು ಅಥವಾ ಇರುವಿಕೆ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ಸಂಪರ್ಕಿಸಲು:
ಜಿಲ್ಲಾ ಕಂಟ್ರೋಲ್ ರೂಂ: 0824 2220500, 9480805300
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ: 08255-235000, 9480805368
ಪ್ರಕರಣದ ತನಿಖೆ ಮುಂದುವರಿದಿದ್ದು, ಸಾರ್ವಜನಿಕರ ಸಹಕಾರವನ್ನು ಪೊಲೀಸರು ಕೋರಿದ್ದಾರೆ.

























