ಪುತ್ತೂರು: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರ ಅಮಾನತು ಶಾಸಕರ ಸೇಡಿನ ಕ್ರಮದಂತೆ ಕಾಣುತ್ತಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡಲು ಹಕ್ಕಿದೆ. ಅನುಮತಿ ಪಡೆದೇ ಪ್ರತಿಭಟನೆ ಮಾಡಬೇಕೆಂದೇನೂ ಇಲ್ಲ.ವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ.ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಅಡ್ಡಿಯಾಗಿದಾ ಎಂಬುದು ಇರುವುದು. ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸಾರ್ವಜನಿಕರಿಗೆ, ವಾಹನಗಳಿಗೆ ಅಡ್ಡಿಯಾಗಿಲ್ಲ. ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು 18 ವರ್ಷ ಪ್ರಾಯ ಮೇಲ್ಪಟ್ಟವರು. ಅವರು ಪ್ರಬುದ್ದರು. ಮಕ್ಕಳು ಪ್ರತಿಭಟನೆ ಮಾಡುವುದು ಇದೇ ಮೊದಲಲ್ಲ.ಎಷ್ಟೋ ಪ್ರತಿಭಟನೆ ನಡೆದಿದೆ. ಆಗ ಯಾವ ಪ್ರಾಂಶುಪಾಲರ ಮೇಲೆಯೂ ಆ್ಯಕ್ಷನ್ ಆಗಿಲ್ಲ.ಕಾಲೇಜಿನಲ್ಲಿ ಸಮಸ್ಯೆ ಆಗಿರುವ ಕುರಿತು ಪತ್ರಿಕೆಗಳಲ್ಲಿ ಉಲ್ಲೇಖ ಆಗಿದೆ.ಅಲ್ಲಿನ ಇಡೀ ಘಟನೆ ಕಾಲೇಜು ಅಭಿವೃದ್ಧಿಸಮಿತಿ ಅಧ್ಯಕ್ಷರಾಗಿರುವ ಶಾಸಕರಿಗೆ ಗೊತ್ತಿರಬೇಕು. ಶಾಸಕರ ಗಮನಕ್ಕೆ ಇದು ಬರಲಿಲ್ಲ ಎಂದಾದರೆ ಶಾಸಕರು ಕಾಲೇಜಿನ ಬಗ್ಗೆ ಎಷ್ಟು ಗಮನ ಕೊಟ್ಟಿರಬಹುದು ಎಂಬುದು ಪ್ರಶ್ನೆ.ಪ್ರತಿಭಟನೆ ಕುರಿತು ಕಾಲೇಜಿನಿಂದ ಶಾಸಕರಿಗೆ ಮುನ್ಸೂಚನೆ ನೀಡಿದ್ದಾರೆ. ಕೊಟ್ಟಮೇಲೆಯೂ ಮಹಿಳಾ ಕಾಲೇಜಿನ ಪ್ರಾಂಶುಪಾಲರಮೇಲೆ ಸೇಡಿನ ಕ್ರಮ ಕೈಗೊಂಡಿದ್ದಾರೆ.
ಆ ಪ್ರಾಂಶುಪಾಲರು ಓರ್ವ ಮಹಿಳೆ ಮತ್ತು ಅನಾರೋಗ್ಯದಲ್ಲಿದ್ದಾರೆ.ಜೊತೆಗೆ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಅವರ ಮೇಲೆ ಆ್ಯಕ್ಷನ್ ತೆಗೆದುಕೊಳ್ಳುವುದು ಒಬ್ಬ ಮಹಿಳೆಯ ಮೇಲೆ ಶಾಸಕರಿಗೆ ಇರುವ ಕಾಳಜಿ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದು ಮಠಂದೂರು ತಿಳಿಸಿದ್ದಾರೆ.

























