ಉಪ್ಪಿನಂಗಡಿಯಲ್ಲಿ ಸಹಸ್ರಲಿಂಗೇಶ್ವರ ಮಹಾಕಾಳಿ ಕ್ಷೇತ್ರದ ಎದುರು ಭಾಗದಲ್ಲಿ ಪ್ರಥಮ ಬಾರಿಗೆ ನಾಗಮಂಡಲ ಉತ್ಸವ ನಡೆಯಲಿದ್ದು ಈ ನಾಗಮಂಡಲ ಉತ್ಸವದ ಪೂರ್ವಭಾವಿಯಾಗಿ ಪದಾಧಿಕಾರಿಗಳ ಆಯ್ಕೆ ಮತ್ತು ಸಮಾಲೋಚನಾ ಸಭೆ ಉಪ್ಪಿನಂಗಡಿಯ ಶಕ್ತಿ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನೂರಾರು ಭಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದು ನಾಗಮಂಡಲ ಉತ್ಸವದ ಬಗ್ಗೆ ವಿಸ್ತ್ರತ ಚರ್ಚೆಗಳು ನಡೆದವು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ನಾಗಮಂಡಲ ಉತ್ಸವ ಸಮಿತಿ ಉಪ್ಪಿನಂಗಡಿ ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ದಿನಾಂಕ 2026ನೇ ಏಪ್ರಿಲ್ ತಿಂಗಳ ಐದನೇ ತಾರೀಕಿಗೆ ಕಾರ್ಯಕ್ರಮ ನೆರವೇರಲಿದ್ದು ಈ ಕಾರ್ಯಕ್ರಮದ ವ್ಯವಸ್ಥೆಯ ದೃಷ್ಟಿಕೋನದಿಂದ ನಾಗಮಂಡಲ ಉತ್ಸವ ಸಮಿತಿಯನ್ನು ಮಾಡಲಾಯಿತು.
ಅಧ್ಯಕ್ಷರಾಗಿ ಶ್ರೀ ಚಂದಪ್ಪ ಮೂಲ್ಯ, ಗೌರವಾಧ್ಯಕ್ಷರುಗಳಾಗಿ ಪ್ರತಾಪ್ ಪೆರಿಯಡ್ಕ, ಹೇರಂಬ ಶಾಸ್ತ್ರಿ, ಶ್ರೀರಾಮ ಭಟ್ ಪಾತಾಳ, ಸಂಚಾಲಕರಾಗಿ ಅರುಣ್ ಕುಮಾರ್ ಪುತ್ತಿಲ, ಕಾರ್ಯಧ್ಯಕ್ಷರಾಗಿ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಶಾಂತ್ ನೆಕ್ಕಿಲಾಡಿ, ನವೀನ್ ಕುಮಾರ್ ಕಲ್ಯಾಟೆ, ಸಹ ಸಂಚಾಲಕರಾಗಿ ಉಮೇಶ್ ಗೌಡ ಕೋಡಿಬೈಲು ಅನಿಲ್ ತೆಂಕಿಲ ಮತ್ತು ಕೋಶಾಧಿಕಾರಿ ಯಾಗಿ ಯತೀಶ್ ಶೆಟ್ಟಿ ಅವರನ್ನು ಮಾಡಲಾಯಿತು. ಒಟ್ಟು ವ್ಯವಸ್ಥೆಯ ಬಗ್ಗೆ ಸಮಿತಿಗಳಿಗೆ ಜವಾಬ್ದಾರಿ ಹಂಚಲಾಯಿತು.
ಈ ಕಾರ್ಯಕ್ರಮ ಅತ್ಯಂತ ಶ್ರದ್ದೆ ಮತ್ತು ಭಕ್ತಿಯ ಜೊತೆಗೆ ಸಂಪನ್ನಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಹಿಂದೂ ಬಂದುಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ಸಲಹೆಗಳನ್ನು ಭಕ್ತರು ನೀಡಿದರು. ಪ್ರಶಾಂತ್ ನೆಕ್ಕಿಲಾಡಿ ಸ್ವಾಗತಿಸಿ ಶ್ರೀರಾಮ್ ಭಟ್ ವಂದಿಸಿದರು.



























