ಪುತ್ತೂರು: ಕೆಮ್ಮಿಂಜೆ ಗ್ರಾಮದ ಗ್ರಾಮದೈವ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಮಾರ್ಚ್ 15, 2026 ರಂದು ನಡೆಯಲಿರುವ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ದೈವಸ್ಥಾನದಲ್ಲಿ ನಡೆಯಿತು.
ದೈವಸ್ಥಾನದ ಆವರಣದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ದೈವಸ್ಥಾನದ ಟ್ರಸ್ಟಿನ ಸದಸ್ಯರು ಹಾಗೂ ಪರಿಚಾರಕ ವರ್ಗದವರು, ಗೌರವಾಧ್ಯಕ್ಷರಾದ ಎನ್ ರವೀಂದ್ರ ಶೆಟ್ಟಿ, ಅಧ್ಯಕ್ಷರಾದ ಪಿ ಶ್ರೀಧರ ಹೆಗ್ಡೆ,ಗೌರವ ಸಲಹೆಗಾರರಾದ ಡಾ. ದಿನೇಶ್ ಸಿ ಎಚ್, ಡಾ. ರಮೇಶ್ ಕೆ, ಸಂಚಾಲಕರಾದ ದಯಾನಂದ ಎಂ, ಉಪಾಧ್ಯಕ್ಷರಾದ ವಿಶ್ವನಾಥ್ ನಾಯ್ಕ್, ಕೆ ಲೋಕನಾಥ, ಎ ತಿಮ್ಮಪ್ಪ, ಲೋಕೇಶ್,ಪ್ರಧಾನ ಕಾರ್ಯದರ್ಶಿ ಗಣೇಶ್, ಕಜಾಂಜಿ ಸುನಿಲ್ ಕುಮಾರ್ ಪಿ, ಸಹ ಕಾರ್ಯದರ್ಶಿ ಚಂದ್ರಶೇಖರ್, ಸಹ ಖಜಾಂಜಿ ಸುರೇಶ್, ಪ್ರಮೀಳಾ, ವೀಣಾ ಜೆ ರಾವ್, ವೈದಿಕ ಸಲಹೆಗಾರರಾದ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ , ಸುಬ್ರಹ್ಮಣ್ಯ ಬಳ್ಳಕುರಾಯ, ದೈವದ ಪೂಜಾರಿ ಪೂವಪ್ಪ ದೇವಾಡಿಗ, ದೈವ ಪಾತ್ರಿ ಯೋಗೀಶ್ ದೇವಾಡಿಗ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ವೀ ಆಯೋಜನೆಗಾಗಿ ಅಗತ್ಯ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು.
ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಟ್ರಸ್ಟ್ ವತಿಯಿಂದ ಮನವಿ ಮಾಡಲಾಗಿದೆ.



























