ಬಂಟ್ವಾಳ: ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾ.07 ಬಂಟ್ವಾಳಕ್ಕೆ ಆಗಮಿಸಿದ ಸಿದ್ದರಾಮಯ್ಯ ಮೂಡೂರು ಪಡೂರು ಕಂಬಳವನ್ನು ಉದ್ಘಾಟಿಸಿ ಮಾತನಾಡಿದರು. ರಮಾನಾಥ್ ರೈ ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನ ತಂದು ಒಳ್ಳೆಯ ಕೆಲ್ಸ ಮಾಡಿದ್ದಾರೆ. ಆದರೆ ಅವರು ಸೋತಿರುವುದು ಬಹಳ ಬೇಸರ ತಂದಿದೆ. ರೈ ಗಳು ಮುಂದಿನ ಚುನಾವಣೆಯ ಸ್ಪರ್ಧಿಸುತ್ತಾರೆ ಎಲ್ಲರೂ ಸೇರಿ ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು ಎಂದು ಹೇಳಿದರು.
ಈ ಮೂಲಕ ಮುಂದಿನ ಬಾರಿಯೂ ಬಂಟ್ವಾಳ ಕ್ಷೇತ್ರಕ್ಕೆ ರಮಾನಾಥ ರೈ ಅಭ್ಯರ್ಥಿ ಎಂದುಪರೋಕ್ಷವಾಗಿ ಹೇಳಿದರು.



























