ಪುತ್ತೂರು: ಸಾಮೆತ್ತಡ್ಕ ಸಿ.ಟಿ.ಒ ರಸ್ತೆ ನಿವಾಸಿ, ಮಾಯಿದೆ
ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ(ಫುರ್ಟಾದೊ) ಮಾ.9 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಮೃತ ಲೀನಾ ಸಲ್ದಾನ್ಹಾರವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಪತಿ ರೊಜಾರಿಯೋ ಓಸ್ವಾಲ್ಡ್ ಸಲ್ದಾನ್ಹಾ, ಪುತ್ರಿ ಜೆನಿಫರ್ ಫ್ಲಾವಿಯಾ ರಸ್ಕಿನ್ಹಾ, ಪುತ್ರ ಜೋಯಿಸ್ಟರ್ ಜೋನ್ ಸಲ್ದಾನ್ಹಾ, ಅಳಿಯ ಮೆಲ್ವಿನ್ ರಸ್ಕಿನ್ಹಾ, ಸೊಸೆ ನೊನಿಶಾ ಲಸ್ರಾದೋ, ಸಹೋದರ ಚಾರ್ಲ್ಸ್ ಫುಡ್ತಾದೋ, ಸಹೋದರಿಯರಾದ ಜ್ಯುಲಿಯಾನ ಡಿ’ಸೋಜ, ಫಿಲೋಮಿನಾ ಸಲ್ದಾನ್ಹಾ, ಮೇರಿ ಆರೋಜ, ಮೋಲಿ ಕ್ಯಾಸ್ಟಲಿನೋ ಹಾಗೂ ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ.



























