ಪುತ್ತೂರು : ಸಂಟ್ಯಾರು ಎಂಬಲ್ಲಿ ಕಾರೊಂದು ಏಳು ವಾಹನಗಳಿಗೆ ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಗುರುವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಆರು ಬೈಕ್, ಒಂದು ಕಾರಿಗೆ ಹಾನಿ ಉಂಟಾಗಿದೆ. ಢಿಕ್ಕಿ ಹೊಡೆದ ಕಾರು ಪಾಣಾಜೆ ರಸ್ತೆಯಲ್ಲಿ ಪರಾರಿಯಾಗಿದೆ. ಸಾರ್ವಜನಿಕರು ಆತನನ್ನು ಹಿಡಿದು ಪೋಲಿಸರಿಗೊಪ್ಪಿಸಿದ್ದಾರೆ. ಅಪ್ರಾಪ್ತ ವಯಸ್ಸಿನವನು ಕಾರು ಚಲಾಯಿಸುತ್ತಿದ್ದ ಶಂಕೆ ಇದ್ದು ಗಾಂಜಾ ಸೇವಿಸಿರಬಹುದೇ ಎನ್ನುವ ಅನುಮಾನ ಮೂಡಿದೆ.


























