ಸುಳ್ಯ: ಮಾರ್ಚ್ 14ರಂದು ಸಂಜೆ ಶ್ರೀರಾಮ್ ಪೇಟೆಯಲ್ಲಿರುವ ರಾಜೇಶ್ ಬಾರ್‌ನಲ್ಲಿ ನಡೆದ ಚೂರಿ ಹಲ್ಲೆ ಘಟನೆಯಲ್ಲಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ನಿತೇಶ್ ಆರ್.ಕೆ (33) ಹಾಗೂ ಅವರ ಸ್ನೇಹಿತ ಹರೀಶ್ ಮೇಲೆ ಇಬ್ಬರು ಯುವಕರು ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹಲ್ಲೆಯ ಪರಿಣಾಮವಾಗಿ ಹರೀಶ್ ಅವರ ಎಡ ಕುತ್ತಿಗೆಗೆ ಹಾಗೂ ಇಬ್ಬರ ಎಡ ಕೈಗಳಿಗೆ ಗಾಯಗಳಾಗಿವೆ.
ಬಾರ್‌ನಲ್ಲಿ ಇದ್ದ ಇತರರು ತಕ್ಷಣ ಮಧ್ಯಪ್ರವೇಶಿಸಿ ಹಲ್ಲೆಯನ್ನು ತಡೆದು ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ 31/2026 ಪ್ರಕರಣ ದಾಖಲಿಸಲಾಗಿದೆ. 2023ರ ಬಿಎನ್‌ಎಸ್ ಕಲಂ 118(1), 109 r/w 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಜ್ಜಾವರ ಗ್ರಾಮದ ರಾಜೇಶ್ ಬಿ.ಆರ್ (27) ಮತ್ತು ದಯಾನಂದ್ (30) ಅವರನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

























