ಮುಂಡಾಜೆ: ಸಮೀಪದ ಅರಸಮಜಲು ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ನೇತ್ರಾವತಿ ನದಿಯಲ್ಲಿ ಈಜಲು ಹೋಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಯೊಬ್ಬನು ಮುಳುಗಿ ಸಾವನ್ನಪ್ಪಿದ್ದಾನೆ.
ಮೃತಪಟ್ಟ ವಿದ್ಯಾರ್ಥಿಯನ್ನು ನಿಶಾಂತ್ (16) ಎಂದು ಗುರುತಿಸಲಾಗಿದೆ. ಮಾ.18ರಂದು ಮಧ್ಯಾಹ್ನ ವೇಳೆ ಆತ ತನ್ನ ಸಂಬಂಧಿಕರೊಂದಿಗೆ ಮನೆ ಸಮೀಪದ ನದಿಗೆ ಈಜಲು ತೆರಳಿದ್ದನು. ಈ ವೇಳೆ ಅಕಸ್ಮಾತ್‌ವಾಗಿ ನದಿಯಲ್ಲಿ ಮುಳುಗಿದನು.
ಘಟನೆಯ ತಕ್ಷಣವೇ ಜೊತೆಗಿದ್ದವರು ಆತನನ್ನು ರಕ್ಷಿಸಲು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ನಂತರ ಆತನನ್ನು ಮೇಲಕ್ಕೆತ್ತಿದರೂ ಆಗಲೇ ಆತ ಸಾವನ್ನಪ್ಪಿದ್ದನೆಂದು ತಿಳಿದುಬಂದಿದೆ.
ಈ ಘಟನೆ ಸ್ಥಳೀಯರಲ್ಲಿ ದುಃಖದ ವಾತಾವರಣವನ್ನು ಮೂಡಿಸಿದೆ.


























