ಪುತ್ತೂರು: ಕಲ್ಲೇಗ ನಿವಾಸಿ ರಾಜೇಶ್ ಎಂ ಅವರ ಮಾಲಕತ್ವದ ‘ಶಾಸ್ತಾ ಕನ್ಸಲ್ಟೆನ್ಸಿ ಮಾ.20ರಂದು ಪುತ್ತೂರು ಸರಕಾರಿ ಆಸ್ಪತ್ರೆ ರಸ್ತೆಯ ಪುತ್ತೂರು ಸೆಂಟರ್ನ ಕೆಳಅಂತಸ್ತಿನಲ್ಲಿ ಶುಭಾರಂಭಗೊಳ್ಳಲಿದೆ.
ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ದಕ್ಷಾ ಕನ್ಸಲ್ಟೆನ್ಸಿ ಪುತ್ತೂರು ಇದರ ಮಾಲಕ ರವೀಂದ್ರ ಪಿ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಯು.ಆರ್. ಪ್ರಾಪರ್ಟೀಸ್ನ ಮಾಲಕ ಉಜ್ವಲ್ ಪ್ರಭು ಹಾಗೂ ಬಿಗ್ ಬಾಸ್ ಖ್ಯಾತಿಯ ಧನ್ರಾಜ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕ ರಾಜೇಶ್ ಕಲ್ಲೇಗ ತಿಳಿಸಿದ್ದಾರೆ.


























