ಮುಕ್ಕೂರು : ನೇಸರ ಯುವಕ ಮಂಡಲ, ನೇಸರ ಯುವತಿ ಮಂಡಲ, ಮುಕ್ಕೂರು ಶಾಲಾ ಪೋಷಕರು, ಮುಕ್ಕೂರು ಅಂಗನವಾಡಿ ಕೇಂದ್ರ ಪೋಷಕರ ಜಂಟಿ ಆಶ್ರಯದಲ್ಲಿ ಮಾ.22 ರಂದು ಸ್ವಚ್ಛತಾ ಕಾರ್ಯಕ್ರಮವೂ ಮುಕ್ಕೂರು ಶಾಲೆ, ಅಂಗನವಾಡಿ ವಠಾರದಲ್ಲಿ ನಡೆಯಿತು.
ಬೆಳಗ್ಗೆ 9 ಗಂಟೆಯಿಂದ ಶಾಲಾ ಪರಿಸರ, ಅಂಗನವಾಡಿ ಹಿಂಭಾಗದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಉಪಹಾರ, ಜ್ಯೂಸ್ ವ್ಯವಸ್ಥೆಯನ್ನು ಸುನೀತಾ ಕಂರ್ಬುತ್ತೋಡಿ, ಅಶ್ವಿನಿ ಅಡ್ಯತಕಂಡ, ವನಿತಾ ಅಡ್ಯತಕಂಡ, ಜಬ್ಬಾರ್ ಮತ್ತು ಮನೆಯವರು ಮುಕ್ಕೂರು ಇವರು ಒದಗಿಸಿದರು.



























