ಅತ್ಯುತ್ತಮ ಪಾರ್ಕಿಂಗ್ ವ್ಯವಸ್ಥೆ, ದಿನದ 24 ಗಂಟೆಯೂ ನೀರಿನ ಸೌಲಭ್ಯ, ಜನರೇಟರ್ ವ್ಯವಸ್ಥೆ, ಸೆಕ್ಯುರಿಟಿ ವ್ಯವಸ್ಥೆ, ಪಾರ್ಕ್, ಆಟದ ಆವರಣ, ಬ್ಯಾಂಕ್ ಲೋನ್ ಸೌಲಭ್ಯ, ವಿನೂತನ ಮಾದರಿಯ ಸೇವೆ ಹೀಗೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪುತ್ತೂರಿನಲ್ಲಿ ಸ್ಮಾರ್ಟ್ ಆಗಿರುವ ಮತ್ತೊಂದು ಸುವ್ಯವಸ್ಥಿತ ಕಟ್ಟಡ ನಿರ್ಮಾಣಗೊಂಡಿದೆ.
ಪುತ್ತೂರಿನ ಹೃದಯ ಭಾಗದಿಂದ ಸುಧಾನ ಶಾಲಾ ಬಳಿ 400 ಮೀ ಅಂತರದಲ್ಲಿ ಮಾಣಿ ಮೈಸೂರು ಹಾದಿಯಾಗಿ ಮಂಜಲ್ಪಡ್ಪು ಕಾರ್ಜಾವಿನಲ್ಲಿ ನಿರ್ಮಾಣಗೊಂಡಿರುವ ಬೃಹತ್ ಕಟ್ಟಡವೇ ಕೀರ್ತನಾ ಪರ್ಲ್ಸ್. ಅತ್ಯಾಧುನಿಕ ಅತ್ಯಾಕರ್ಷಕ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡದಲ್ಲಿ 5 ಅಂತಸ್ತುಗಳಿದ್ದು ಒಟ್ಟು 45 ಫ್ಲಾಟ್ ಗಳನ್ನು , ಆಟೋ ಡೋರ್ಸ್ ಜತೆ 8 ಮಂದಿ ಸಾಮರ್ಥ್ಯದ ಹೈ ಸ್ಪೀಡ್ ಲಿಫ್ಟ್ ಗಳು, ಎಲ್ಲಾ ಅಂತಸ್ತುಗಳಲ್ಲೂ 3 BHKಯ 5, 2BHKಯ 35 ಫ್ಲಾಟ್, 1 BHKಯ 5 ಫ್ಲಾಟ್ ಗಳಿವೆ. , ವಸತಿ ಸಮುಚ್ಛಯ ಹಾಗೂ ವಾಣಿಜ್ಯ ಸಂಕೀರ್ಣಗಳನ್ನೊಳಗೊಂಡಿರುವ ಕೀರ್ತನಾ ಸಂಸ್ಥೆಯ ನಾಲ್ಕನೇ ಬೃಹತ್ ಯೋಜನೆಯಾಗಿದ್ದು ಕಟ್ಟಡದ ಶುಭಾರಂಭ ಕಾರ್ಯಕ್ರಮವು ನಡೆಯಿತು.
ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಚಕ್ರಪಾಣಿ ದೇವಪೂಜಿತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿದರು.. ಈ ಸಂದರ್ಭದಲ್ಲಿ ಮುರಳೀಧರ ಬಲ್ಲಾಳ್, ಸೂರಿ ಪ್ರಭುದೇವ್, ಗುರು ರಂಗಯ್ಯ ಬಲ್ಲಾಳ್, ಉದ್ಯಮಿ ವಸಂತ್ ಕಾಮತ್, ಪ್ರಗತಿ ಸ್ಪೆಶಾಲಿಟಿ ವೈದ್ಯರಾದ ಡಾ. ಶ್ರೀಪತಿ ರಾವ್,ಶ್ರೀ ವತ್ಸಲಾ ಶಿವಕುಮಾರ್, ಜಿ. ಎಲ್. ಆಚಾರ್ಯ ಮಾಲಕರಾದ ಬಲರಾಮ್ ಆಚಾರ್ಯ, ಪುಷ್ಪಾ ಮುರಳೀಧರ್,ವೀಣಾ ಕುಮಾರಿ, ಅನ್ನಪೂರ್ಣೇಶ್ವರಿ ರಾಜೇಶ್ ವರ್ಮಾ, ಸಂತೋಷ್ ಕುಮಾರ್ ರೈ, ಪ್ರಕಾಶ್ ನಾಯಕ್, ಉದಯ್ ಕುಮಾರ್, ಸುಂದರ ನೂರಿತ್ತಾಯರು, ಹರೀಶ್ ಕುಮಾರ್, ಶಿವ ಪ್ರಸಾದ್, ರಾಘವೇಂದ್ರ, ವಿರೂಪಾಕ್ಷ ಭಟ್, ಸ್ಮಿತಾ ಎಸ್, ರಾಮ್ ಭಟ್, ಸತೀಶ್ ಭಟ್, ರಾಘವೇಂದ್ರ ಮಯ್ಯ,ಆನಂದ್ ಭಟ್, ಹರಿಣಿ ಪುತ್ತೂರಾಯ, ಕೀರ್ತನಾ ಡೆವಲಪರ್ಸ್ ವ್ಯಾವಹಾರಿಕ ನಿರ್ದೇಶಕರಾದ ಪ್ರತಾಪ್ ಸಿಂಹ ವರ್ಮ, ಮಾತೃಶ್ರೀ ವಿಮಲಮ್ಮ, ಅಜಿತ್ ಕುಮಾರ್ ಜೈನ್, ಶ್ಯಾಮ್ ಜೀ ಕ್ಯಾಂಪ್ಕೋ, ದೇವಿಚರಣ್, ಪದ್ಮನಾಭ ಶೆಟ್ಟಿ, ಸುದರ್ಶನ ವಾಣಿ, ಸಂಸ್ಥೆಯ ನಿರ್ದೇಶಕರಾದ ಪ್ರಸನ್ನ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.