ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಅ.ಕ್ರ. ಸಂ.: 181/2019 ಪ್ರಕರಣದಲ್ಲಿ (ಕಲಂ 323, 507, 353, 504 ಐಪಿಸಿ), ಆರೋಪಿಯಾಗಿರುವ ಮಂಜೇಶ್ವರ ನಿವಾಸಿ ಮೊಹಮ್ಮದ್ ಫಯಾಜ್ (33) ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು.
ಈ ಹಿನ್ನೆಲೆಯಲ್ಲಿ, ವಿಟ್ಲ ಪೊಲೀಸ್ ಠಾಣೆಯ ಎಎಸ್ಐ ಜಯರಾಮ ಹಾಗೂ ಸಿಬ್ಬಂದಿಗಳಾದ ಹೆಚ್ಸಿ 668 ಶ್ರೀಕುಮಾರ್, ಪಿಸಿ 2465 ಗೋಪಾಲಕೃಷ್ಣ, ಪಿಸಿ 2324 ಮಾಯಪ್ಪ ಮತ್ತು ಪಿಸಿ 2355 ವೆಂಕಪ್ಪ ಅವರ ತಂಡವು ದಿನಾಂಕ 24.03.2026 ರಂದು ಮಂಜೇಶ್ವರದ ಬಾಯಾರು ಪದವು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಬಂಧಿತ ಆರೋಪಿಯನ್ನು ನಂತರ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



























