ದೇವಚಳ್ಳ ಗ್ರಾಮದ ಕಲ್ಲುಪಣೆ ಕೃಷ್ಣಪ್ಪ ನಾಯ್ಕರವರ ಪುತ್ರಿ ಉಷಲತಾ ನಿನ್ನೆ ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು. ಅವರಿಗೆ ಸುಮಾರು 31 ವರ್ಷ ಪ್ರಾಯವಾಗಿತ್ತು.
ಮಾವಿನಕಟ್ಟೆಯ ಅರ್ಣ ಗ್ಯಾಸ್ ನಲ್ಲಿ ಉದ್ಯೋಗಿಯಾಗಿರುವ ಉಷಾರವರು ಕಳೆದ 2 ವರ್ಷದ ಹಿಂದೆ ಅಲೆಟ್ಟಿಯ ಸೂರಜ್ ಎಂಬವರನ್ನು ವಿವಾಹವಾಗಿದ್ದರು.
ಮೃತರು ಪತಿ, ತಂದೆ, ತಾಯಿ ಹಾಗೂ ಸಹೋದರಿಯರನ್ನು ಅಗಲಿದ್ದಾರೆ. ಇಂದು ದೇವಚಳ್ಳ ಗ್ರಾಮದ ಕಲ್ಲುಪಣೆ ಯಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.



























