ಉಪ್ಪಿನಂಗಡಿಯಲ್ಲಿ ನಡೆದ ಕಂಬಳೋತ್ಸವದ ಸಂದರ್ಭದಲ್ಲಿ ಕಂಬಳದ ಕೋಣಗಳನ್ನು ನದಿಯಲ್ಲಿ ಸ್ನಾನ ಮಾಡಿಸುತ್ತಿದ್ದ ವೇಳೆ, ಅಲ್ಲಿ ಇದ್ದ ಬಾಲಕನೊಬ್ಬ ಆಕಸ್ಮಿಕವಾಗಿ ನದಿ ನೀರಿನಲ್ಲಿ ಮುಳುಗಿದ್ದಾನೆ.
ಈ ಸಂದರ್ಭದಲ್ಲೇ ತಕ್ಷಣ ಧೈರ್ಯದಿಂದ ಕಾರ್ಯನಿರ್ವಹಿಸಿದ ರಕ್ಷಿತ್ ಎಂಬ ಬಾಲಕ, ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ಮೇಲಕ್ಕೆ ಎತ್ತಿ ಅಪಾಯದಿಂದ ರಕ್ಷಿಸಿದ್ದಾನೆ. ರಕ್ಷಿತ್‌ನ ಸಾಹಸ ಮತ್ತು ತಕ್ಷಣದ ಸ್ಪಂದನೆ ಸ್ಥಳದಲ್ಲಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
ಈ ಶ್ಲಾಘನೀಯ ಕಾರ್ಯವನ್ನು ಗುರುತಿಸಿದ ಶಾಸಕ ಅಶೋಕ್ ರೈ ಅವರು, ರಕ್ಷಿತ್‌ಗೆ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು. ರಕ್ಷಿತ್‌ನ ಧೈರ್ಯವನ್ನು ಎಲ್ಲರೂ ಕೊಂಡಾಡಿದರು.


























