ಪುತ್ತೂರು: ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ, ಜಾತ್ರಾ ಗದ್ದೆಯ ಏಲಂ ಪ್ರಕ್ರಿಯೆ ಈ ಬಾರಿ ಭಾರೀ ಸಂಚಲನ ಮೂಡಿಸಿದೆ.
ವಿಶೇಷವಾಗಿ ಜಾಯಿಂಟ್ ವೀಲ್ ಏಲಂ ದಾಖಲೆ ಮಟ್ಟ ತಲುಪಿದೆ. ಜಾತ್ರಾ ಗದ್ದೆಯಲ್ಲಿ ನಡೆದ ಹರಾಜಿನಲ್ಲಿ ಜಾಯಿಂಟ್ ವೀಲ್‌ಗಾಗಿ ನಡೆದ ತೀವ್ರ ಪೈಪೋಟಿಯಲ್ಲಿ ಬೆದ್ರಾಳದ ನವೀನ್ ಚಂದ್ರ ನಾಯ್ಕ್ ರವರು ಬರೋಬ್ಬರಿ 66 ಲಕ್ಷ ರೂ.ಗೆ ಏಲಂ ಪಡೆದುಕೊಂಡಿದ್ದಾರೆ. ಈ ಮೊತ್ತ ಜಾತ್ರಾ ಇತಿಹಾಸದಲ್ಲೇ ದಾಖಲೆಯ ಏರಿಕೆಯಾಗಿ ಪರಿಗಣಿಸಲಾಗುತ್ತಿದೆ.
ಗಮನಾರ್ಹವಾಗಿ, ಕಳೆದ ವರ್ಷದ ಜಾತ್ರೆಯಲ್ಲಿ ಇದೇ ಜಾಯಿಂಟ್ ವೀಲ್ ಕೇವಲ 18 ಲಕ್ಷ ರೂ.ಗೆ ಏಲಂ ಆಗಿತ್ತು. ಈ ಬಾರಿ ಮೂರು ಪಟ್ಟು ಹೆಚ್ಚು ಮೊತ್ತ ತಲುಪಿದೆ.
ಪ್ರತಿ ವರ್ಷ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಪುತ್ತೂರು ಜಾತ್ರೆಯಲ್ಲಿ ಜಾಯಿಂಟ್ ವೀಲ್ ಪ್ರಮುಖ ಆಕರ್ಷಣೆಯಾಗಿದ್ದು, ಈ ಬಾರಿ ದಾಖಲೆ ಮೊತ್ತದಲ್ಲಿ ಏಲಂ ಆಗಿರುವುದು ವ್ಯಾಪಾರ ವಲಯದಲ್ಲಿ ಕುತೂಹಲ ಕೆರಳಿಸಿದೆ.




























