ಪುತ್ತೂರು:3 ತಿಂಗಳ ಹಿಂದೆ ಎಂಡಿಎಂಎ ಮಾದಕವಸ್ತು ಸಾಗಾಟಕ್ಕೆ ಸಂಬಂಧಿಸಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ವೇಳೆ ದೊರೆತ ಮಾಹಿತಿಯಂತೆ, ಪ್ರಕರಣದಲ್ಲಿ ಶಾಮೀಲಾಗಿದ್ದ ಆರೋಪಿಯ ಪತ್ನಿ ಸಹಿತ ಇಬ್ಬರನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಜ.24ರಂದು ಇರ್ದೆ ಗ್ರಾಮದ ಪೇರಲ್ಪಡ್ಕದಲ್ಲಿ ಕಾರಿನಲ್ಲಿ ಅಕ್ರಮವಾಗಿ ನಿಷೇಧಿತ ಎಮ್ ಡಿಎಮ್ ಎ ಸಾಗಾಟದ ಪ್ರಕರಣದಲ್ಲಿ ಆರ್ಲಪದವಿನ ಮಹಮ್ಮದ್ ಹರ್ಷದ್, ಇರ್ದೆಯ ಮಹಮ್ಮದ್ ಆರೀಸ್ ಮತ್ತು ಮುಸ್ತಾಫ ಹಾಗು ಇನ್ನೋರ್ವನನ್ನು ಪೊಲೀಸರು ಬಂಧಿಸಿದ್ದರು.
ವಿಚಾರಣೆ ವೇಳೆ, ಆರೋಪಿಗಳಿಗೆ ಎಮ್ ಡಿಎಮ್ ಪೂರೈಸುತ್ತಿದ್ದ ಪ್ರಮುಖ ಆರೋಪಿ ಬಂಟ್ವಾಳದ ಪೆರಾಜೆ ನಿವಾಸಿ ಅಶ್ರಫ್ ಜಿ ಎಂಬುವ ಮಾಹಿತಿ ತಿಳಿದು ಆತನನ್ನು ಮಾ.11ರಂದು ಪೊಲೀಸರು ಬಂಧಿಸಿದ್ದರು.
ಆರೋಪಿ ಆಶ್ರಫ್‌ನನ್ನು ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದ ವೇಳೆ ದೊರೆತ ಮಾಹಿತಿಯಾಧರಿಸಿ, ಆರೋಪಿಯೊಂದಿಗೆ ಪ್ರಕರಣದಲ್ಲಿ ಶಾಮೀಲಾದ ಬಂಟ್ವಾಳ ಪೆರಾಜೆ ನಿವಾಸಿ ಮೊಹಮ್ಮದ್ ಶಮೀಜ್ (18ವ) ಮತ್ತು ಆರೋಪಿ ಅಶ್ರಫ್ ಜಿ ಪತ್ನಿ ಕೆದಿಲ ನಿವಾಸಿ ಶಮೀಮ(32)ರವರನ್ನು ಪೊಲೀಸರು ಎ.7ರಂದು ಬಂಧಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ‘ ನ್ಯಾಯಾಂಗ ಬಂಧನ ವಿಧಿಸಿದೆ.




























