ಬೆಳ್ತಂಗಡಿ ನಿವಾಸಿಯಾದ ಯುವತಿಯೊಬ್ಬಳು ಸೆಲ್ಸ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಸಂಸ್ಥೆಯ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಏಪ್ರಿಲ್ 8, 2026 ರಂದು ಮಧ್ಯಾಹ್ನ ತನ್ನ ಇಬ್ಬರು ಸಹೋದ್ಯೋಗಿ ಯುವತಿಯರೊಂದಿಗೆ ಕಡಬ ತಾಲೂಕಿನ ಬಲ್ಯ ದೇರಾಜೆ ಪ್ರದೇಶಕ್ಕೆ ತೆರಳಿದ್ದರು.
ಈ ವೇಳೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾಗ ಸ್ಥಳೀಯ ನಿವಾಸಿಯಾದ ಆರೋಪಿಯೊಬ್ಬನು ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಕುರಿತು ವಿಚಾರಿಸಲು ಬಂದ ಸಹೋದ್ಯೋಗಿಗಳ ಮೇಲೂ ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅ.ಕ್ರ: 43/2026 ಅಡಿಯಲ್ಲಿ BNS-2023 ರ ಕಲಂ 74, 79, 115(2), 352 ಮತ್ತು 351(2) ಅನ್ವಯ ತನಿಖೆ ಮುಂದುವರಿದಿದೆ. ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.



























