ಸುಳ್ಯ ಕಸಬಾ ವ್ಯಾಪ್ತಿಯಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುಳ್ಯ ನಿವಾಸಿ ಪುಣ್ಯಶ್ರೀ(20) ಅವರ ದೂರಿನ ಪ್ರಕಾರ, ಅವರ ತಂದೆಗೆ ಶೃತಿ @ ವಿಶ್ಮೀತ(37) ಎಂಬಾಕೆಯೊಂದಿಗೆ ಪರಿಚಯವಿದ್ದು, ಆಕೆಗೆ ಸುಮಾರು 6 ಲಕ್ಷ ರೂಪಾಯಿ ಸಾಲವಾಗಿ ನೀಡಲಾಗಿತ್ತು. ಹಣವನ್ನು ಹಿಂತಿರುಗಿಸುವಂತೆ ಕೇಳಿದ ಹಿನ್ನೆಲೆಯಲ್ಲಿ, ಆರೋಪಿತೆ ಏಪ್ರಿಲ್ 7, 2026ರಂದು ಪುಣ್ಯಶ್ರೀ ಅವರ ಮನೆಗೆ ಭೇಟಿ ನೀಡಿದ್ದಳು.
ಆ ದಿನ ಪುಣ್ಯಶ್ರೀ ಕೆಲಸಕ್ಕೆ ತೆರಳಿದ ನಂತರ, ರಾತ್ರಿ ಮನೆಗೆ ಬಂದು ಕಪಾಟಿನ ಬೀಗದ ಕೀ ಬಿದ್ದಿರುವುದನ್ನು ಗಮನಿಸಿ ಪರಿಶೀಲಿಸಿದಾಗ, ಸುಮಾರು 5 ಲಕ್ಷ ರೂಪಾಯಿ ಮೌಲ್ಯದ 62½ ಗ್ರಾಂ ಚಿನ್ನಾಭರಣಗಳು ಕಳವಾಗಿರುವುದು ಪತ್ತೆಯಾಯಿತು. ಈ ಕುರಿತು ಶೃತಿ @ ವಿಶ್ಮೀತ ವಿರುದ್ಧ ಅನುಮಾನ ವ್ಯಕ್ತಪಡಿಸಿ ದೂರು ನೀಡಲಾಗಿತ್ತು.
ಈ ಆಧಾರದ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.49/2026, ಕಲಂ 331(3), 305 ಬಿಎನ್ಎಸ್ 2023ರಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಆರೋಪಿತೆ ಶೃತಿ @ ವಿಶ್ಮೀತ ಹಾಗೂ ಕೃತ್ಯಕ್ಕೆ ಸಹಕರಿಸಿದ ಪ್ರದೀಪ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕಳವಾಗಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ತ್ವರಿತ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿರುವುದು ಗಮನಾರ್ಹವಾಗಿದೆ.



























