ಕಾರ್ಕಳ : ನಗರದ ಮಂಜುನಾಥ ಪೈ ಸಭಾಂಗಣ ಬಳಿಯ ದೇವರಗದ್ದೆ ರಸ್ತೆಯಲ್ಲಿ ಚಾಲಕನೊಬ್ಬ ರಿಕ್ಷಾದಲ್ಲಿ ವಿಷ ಸೇವನೆಗೈದು ಆತ್ಮಹತ್ಯೆ ಯತ್ನಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.
ಚಿಕ್ಕಮಗಳೂರು ಮೂಲದವನಾಗಿದ್ದು, ಹಿರಿಯಂಗಡಿ ನಿವಾಸಿಯಾಗಿರುವ ಮಂಜುನಾಥ (34)(ಪ್ರಸ್ತುತ ಬಂಗ್ಲೆಗುಡ್ಡೆಯ ಸದ್ಬಾವನ ನಗರದಲ್ಲಿ ನಿವಾಸಿ) ಎಂಬಾತ ವಿಷ ಸೇವನೆಗೈದು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ವಿಷ ಸೇವನೆಗೈದಿದ್ದ ಮಂಜುನಾಥನನ್ನು ಸ್ಥಳೀಯ ನಾಗರಿಕರು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಆತನ ಸ್ಥಿತಿ ಗಂಭೀರವಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.