ಪುತ್ತೂರು: ದ.ಕ. ಜಿಲ್ಲಾ ಹೋಮ್ ಗಾರ್ಡ್ ಕಮಾಂಡೆಂಟ್ ಡಾ. ಮುರಲೀಮೋಹನ್ ಚೂಂತಾರುರವರು ಪುತ್ತೂರು ವಿಭಾಗದ ಹೋಮ್ ಗಾರ್ಡ್ ಸಿಬ್ಬಂದಿಗಳಿಗೆ ಸೊಳ್ಳೆ ಪರದೆ ವಿತರಣೆಯನ್ನು ಜೂ. 27ರಂದು ನಡೆಸಿಕೊಟ್ಟರು.ಇದೇ ಸಂದರ್ಭದಲ್ಲಿ ವನಮಹೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮನ್ಯು ರೈ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ರಾಮಚಂದ್ರ ಕಾಮತ್, ಹಿರಿಯ ಗೃಹರಕ್ಷಕರಾದ ಜಗನ್ನಾಥ್, ಗೃಹರಕ್ಷಕರಾದ ವಿಠಲ್ ನಾಯ್ಕ್, ಸತ್ಯನಾರಾಯಣ ಭಟ್ ಮತ್ತು ಜಗದೀಶ್ ಪೈ ಮುಂತಾದವರು ಉಪಸ್ಥಿತರಿದ್ದರು.