ಬೆಂಗಳೂರು: ರಾಜ್ಯದ 65 ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ವಿಟ್ಲ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ಆಗಿ ನಾಗರಾಜ್ ಎಚ್. ಇ ರವರನ್ನು ನೇಮಕ ಮಾಡಲಾಗಿದೆ. ಅಲ್ಲದೇ ವಿಟ್ಲ ಮತ್ತು ಬಂಟ್ವಾಳ ಠಾಣೆಯನ್ನು ಮೇಲ್ದರ್ಜೆಗೇರಿಸಲಾಗಿದೆ.
ನಾಗರಾಜ್ ಹೆಚ್. ಇ ಯವರು ವಿಟ್ಲ ಠಾಣೆಯ ಮೊದಲ ಸರ್ಕಲ್ ಇನ್ಸ್ಪೆಕ್ಟರ್ ಆಗಿ ನೇಮಕವಾಗಿದ್ದಾರೆ.
ಅದರಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ನಾಗರಾಜ್ ಡಿ.ಕೆ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೇ ಬೆಳ್ತಂಗಡಿ ಪೊಲೀಸ್ ಠಾಣೆಗೆ ಶಿವಕುಮಾರ್ ಬಿ ರವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಇನ್ನುಳಿದಂತೆ ಲೋಕಾಯುಕ್ತದಲ್ಲಿದ್ದ ಸಿಂಗಂ ಭಾರತಿ.ಜಿ ಯವರನ್ನು ಮತ್ತೆ ಉರ್ವ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಭಾರತಿ ಮೂಡಬಿದ್ರೆ, ಪಣಂಬೂರು, ಉಳ್ಳಾಲ ಠಾಣೆಯಲ್ಲಿದ್ದು, ನಂತರ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದರು.