ದ.ಕ ಜಿಲ್ಲೆಯಲ್ಲಿ ನಾಳೆ ಸಂಜೆ 5 ಗಂಟೆಯವರೆಗೆ ಸಂಚಾರ ಮತ್ತು ವ್ಯಾಪಾರಿ ಚಟುವಟಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದ್ದು, ಪಾಸಿಟಿವಿಟಿ ರೇಟ್ ಕೂಡಾ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನಿನ್ನೆ ಕೊಕ್ಕಡದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು. ಅದರಂತೆ ಸರ್ಕಾರ ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ವ್ಯಾಪಾರ ಮತ್ತು ಸಂಚಾರ ವಹಿವಾಟಿಗೆ ಅನುಮತಿ ನೀಡಿದೆ.
ಶನಿವಾರ ಹಾಗೂ ಆದಿತ್ಯವಾರ ಎಂದಿನಂತೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರಲಿದೆ. ಜಿಲ್ಲಾಡಳಿತ ಹಾಗೂ ಸರ್ಕಾರದ ಆದೇಶ ಜುಲೈ 5 ರ ತನಕ ಮಾತ್ರ ಪ್ರಸ್ತುತವಾಗಿದ್ದು, 5 ರ ನಂತರದ ಮಾರ್ಗಸೂಚಿಯ ಆದೇಶ ನಂತರ ಪ್ರಕಟಿಸುವ ಸಾಧ್ಯತೆ ಇದೆ.