ಪುತ್ತೂರು: ಪುತ್ತೂರಿನ ಹೃದಯಭಾಗದಲ್ಲಿರುವ ಮಾಯಿದೆ ದೇವುಸ್ ಚರ್ಚ್ ಕ್ಯಾಂಪಸ್ ಹಾಗೂ ದರ್ಬೆ ಫಿಲೋಮಿನಾ ಕ್ಯಾಂಪಸ್‌ನಲ್ಲಿ ಮಾಯಿದೆ ದೇವಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳು ಮೌಲ್ಯಯುತ ಗುಣಮಟ್ಟದ ಶಿಕ್ಷಣಕ್ಕೆ ಬಹಳ
ಹೆಸರನ್ನು ಪಡೆದಿದೆ. ಇದೀಗ ಮಾಯಿದೆ ದೇವಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ 2021-22ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಕ್ರಿಯೆಗಳು ಆರಂಭಗೊಂಡಿವೆ.
ಮಾಯಿದೆ ದೇವುಸ್ ಹಿ.ಪ್ರಾ ಶಾಲೆ: ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯು 1937ರಲ್ಲಿ
ಪ್ರಥಮವಾಗಿ ಸ್ಥಾಪಿತಗೊಂಡಿದ್ದು, ಇಲ್ಲಿ ಒಂದರಿಂದ ಏಳರ ತರಗತಿವರೆಗೆ ವಿದ್ಯಾರ್ಥಿಗಳನ್ನು ದಾಖಲು ಮಾಡುವ
ಅವಕಾಶ ಹೊಂದಿದೆ. ಮಾತ್ರವಲ್ಲದೆ 6 ಮತ್ತು
7ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮದ ತರಗತಿಯೂ ಲಭ್ಯವಿದೆ. ಪ್ರಸಕ್ತ ಶ್ರೀಮತಿ ಜಾನೆಟ್ ಡಿ’ಸೋಜರವರು ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ ಬಹುದಾಗಿದೆ. 0251-236988
ವಿಕ್ಟರ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯು 1970ರಲ್ಲಿ ಸ್ಥಾಪನೆಗೊಂಡಿದ್ದು, ಇಲ್ಲಿ ಕೂಡ ಒಂದರಿಂದ ಏಳರ ತರಗತಿವರೆಗೆ ವಿದ್ಯಾರ್ಥಿಗಳನ್ನು ದಾಖಲು ಮಾಡುವ ಅವಕಾಶವನ್ನು ಹೊಂದಿದೆ. ಪ್ರಸಕ್ತ ಹೆರಿ ಡಿ’ಸೋಜರವರು ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ 0251- 231270 ಸಂಪರ್ಕಿಸಬಹುದಾಗಿದೆ.
ವಿಕ್ಟರ್ ಬಾಲಿಕಾ ಪ್ರೌಢಶಾಲೆ: ಪುತ್ತೂರಿನಲ್ಲಿನ ಮೊದಲ ಹೆಣ್ಣು ಮಕ್ಕಳ ಶಾಲೆ ಎಂದು ಪ್ರಸಿದ್ಧಿಯನ್ನು ಪಡೆದಿರುವ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ 8 ರಿಂದ 10 ರವರೆಗೆ ವಿದ್ಯಾರ್ಥಿನಿಯರನ್ನು ದಾಖಲು ಮಾಡುವ ಅವಕಾಶ ಹೊಂದಿದೆ. 1942ರಲ್ಲಿ ಸ್ಥಾಪಿತವಾದ
ಈ ಪ್ರೌಢಶಾಲೆಯು ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ
ಪರೀಕ್ಷೆಗೆ ಅತೀ ಹೆಚ್ಚು ವಿದ್ಯಾರ್ಥಿನಿಯರನ್ನು ಹೊಂದಿದ ಹೆಗ್ಗಳಿಕೆ ಈ ಪ್ರೌಢಶಾಲೆದ್ದಾಗಿದೆ. ಅಲ್ಲದೆ ವಿದ್ಯಾರ್ಥಿನಿಯರ ಸಂಶೋಧನಾ ಜ್ಞಾನ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ
ಸಲುವಾಗಿ ಅಟಲ್ ಟಿಂಕರಿಂಗ್ ಲ್ಯಾಬ್ ಇತ್ತೀಚೆಗೆ ಉದ್ಘಾಟನೆಗೊಂಡಿದೆ. ಪ್ರಸಕ್ತ ಶ್ರೀಮತಿ ರೋಸ್ಲಿನ್ ಲೋಬೋ ರವರು ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ 08251-231970 ಸಂಪರ್ಕಿಸಬಹುದಾಗಿದೆ.
ಫಿಲೋಮಿನಾ ಕೆ.ಜಿ/ಆ.ಮಾ ಶಾಲೆ: ದರ್ಬೆ ಫಿಲೋಮಿನಾ ಕ್ಯಾಂಪಸ್ ನಲ್ಲಿ 2015 ರಲ್ಲಿ ಸಂತ ಫಿಲೋಮಿನಾ ಕೆ.ಜಿ
ಶಾಲೆಯನ್ನು ಆರಂಭಿಸಲಾಗಿದೆ. 2016ರಲ್ಲಿ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯು
ಆರಂಭಿಸಲಾಗಿದ್ದು, ಇಲ್ಲಿ 1 ರಿಂದ 7ರ ವರೆಗೆ ಕಲಿಯುವ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಸಕ್ತ ಸಿಸ್ಟರ್ ಲೋರಾ ಪ್ಯಾಸ್ ರವರು ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ 08251-237470 ಸಂಪರ್ಕಿಸಬಹುದಾಗಿದೆ.
ಫಿಲೋಮಿನಾ ಪ್ರೌಢಶಾಲೆ: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯು 1949ರಲ್ಲಿ ಸ್ಥಾಪನೆಗೊಂಡಿದ್ದು, ಈ ಪ್ರೌಢಶಾಲೆ ಕೂಡ ಎಸ್.ಎಸ್.ಎಲ್. ಸಿ ಪರೀಕ್ಷೆಗೆ ತಾಲೂಕಿನಲ್ಲಿ ಅತೀ ಹೆಚ್ಚು ವಿದ್ಯಾರ್ಥಿನಿಯರನ್ನು ಹೊಂದಿದ ಹೆಗ್ಗಳಿಕೆಯನ್ನು ಪಡೆದಿದೆ. ಅಲ್ಲದೆ ವಿದ್ಯಾರ್ಥಿಗಳ ಸಂಶೋಧನಾ ಜ್ಞಾನ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಅಟಲ್ ಟಿಂಕರಿಂಗ್ ಲ್ಯಾಬ್ ಕೂಡ ಹೊಂದಿದೆ. ಪ್ರಸಕ್ತ ಶ್ರೀಮತಿ ಲಿಯೋನಿಲ್ಲಾ ವೇಗಸ್‌ರವರು ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ
ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ 08251-230470 ಸಂಪರ್ಕಿಸಬಹುದಾಗಿದೆ.
ಫಿಲೋಮಿನಾ ಪಿಯು ಕಾಲೇಜು: ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಹಲವಾರು ರ‍್ಯಾಂಕ್ ಗಳನ್ನು ಗಳಿಸಿರುವ ಹೆಗ್ಗಳಿಕೆ ಪಡೆದ ಸಂತ ಫಿಲೋಮಿನಾ
ಪದವಿ ಪೂರ್ವ ಕಾಲೇಜು 1958ರಲ್ಲಿ ಸ್ಥಾಪನೆಗೊಂಡಿತ್ತು. ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ಅನೇಕ ವಿದ್ಯಾರ್ಥಿಗಳು ಪ್ರಜ್ವಲಿಸುವಂತೆ ಮಾಡಿತ್ತು. ವೃತ್ತಿಪರ ಕೋರ್ಸ್‌ಗಳಿಗೆ ಅನುಗುಣವಾಗಿ ಸಿಐಟಿ, ನೀಟ್ ಪರೀಕ್ಷಾ ತರಬೇತಿಗಳನ್ನು ಕೂಡ ಸಂಸ್ಥೆಯು ನೀಡುತ್ತಾ ಬಂದಿದೆ. ಈ ಸಂಸ್ಥೆಯು ಕಲಾ
ವಿಭಾಗ, ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗಗಳನ್ನು ಹೊಂದಿದ್ದು, ಕಲಾ ವಿಭಾಗದಲ್ಲಿ ಎಚ್‌ಇಎಸ್‌ಪಿ, ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಎಂಸಿ, ಎಂಎಸ್, ಪಿಸಿಎಂಇ, ವಾಣಿಜ್ಯ ವಿಭಾಗದಲ್ಲಿ ಇಬಿಎಸ್, ಇಎಎಸ್‌ಸಿ, ಇಸಿಬಿಎ ಕಾಂಬಿನೇಷನ್‌ನಲ್ಲಿ ವಿದ್ಯಾರ್ಥಿಗಳು ಆನ್‌ಲೈನ್
ಮುಖೇನ ದಾಖಲಾತಿ ಮಾಡಿಕೊಳ್ಳಬಹುದು. ವಂ.ವಿಜಯ್ ಲೋಬೋರವರು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ 08251-236340 ಸಂಪರ್ಕಿಸಬಹುದಾಗಿದೆ.