ವಿಟ್ಲ : ವಿಟ್ಲ ಠಾಣಾ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಉತ್ತರಕನ್ನಡ ಜಿಲ್ಲೆಯ ರಾಮನಗರ ಜಿಲ್ಲೆಗೆ ವರ್ಗಾವಣೆಗೊಂಡಿರುವ ವಿನೋದ್ ಕುಮಾರ್ ರೆಡ್ಡಿಯವರಿಗೆ ಶ್ರೀಶಾರದಾ ಯುವ ವೇದಿಕೆ ಮಾಣಿ ಇದರ ವತಿಯಿಂದ ಜೂ.4 ರಂದು ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಸರಕಾರಿ ಉದ್ಯೋಗವನ್ನು ವೃತ್ತಿಯೆಂದು ತಿಳಿಯದೆ
ಕರ್ತವ್ಯ ಪ್ರಜ್ಞೆಯಿಂದ ಕೆಲಸ ನಿರ್ವಹಿಸಿ, ದ.ಕ. ಜಿಲ್ಲೆಯ
ಬಂಟ್ವಾಳ ತಾಲೂಕಿನ ಕೇರಳ ಗಡಿಭಾಗವಾದ ಅತ್ಯಂತ ಸೂಕ್ಷ್ಮಪ್ರದೇಶವಾದ ವಿಟ್ಲ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಅತ್ಯಂತ ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ವಿಟ್ಲ ಭಾಗದ ಎಲ್ಲಾ ಜನರ ಪ್ರೀತಿ ಪಾತ್ರರಾಗಿ ವಿಟ್ಲದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿನೋದ್ ರೆಡ್ಡಿಯವರು ಯಶಸ್ವಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯರಾದ ಅನಂತ ಪ್ರಭು ನೇರಳಕಟ್ಟೆ, ಶಾರದಾ ಯುವ ವೇದಿಕೆ ಅಧ್ಯಕ್ಷರಾದ ಭರತ್ ಶೆಟ್ಟಿ ಮಾಣಿ, ಉಪಾಧ್ಯಕ್ಷರಾದ ಚಂದ್ರ ಬಾನೊಟ್ಟು, ನಿಕಟ ಪೂರ್ವ ಗೌರವಾಧ್ಯಕ್ಷರಾದ ದಿವಾಕರ್ ಆಚಾರ್ಯ ಮಾಣಿ, ಪ್ರಧಾನ ಕಾರ್ಯದರ್ಶಿ ಮೋಹನ್ ಗೌಡ, ಸಂಘಟನಾ ಕಾರ್ಯದರ್ಶಿ ನರಸಿಂಹ ಶೆಟ್ಟಿ ಮಾಣಿ, ಕೋಶಾಧಿಕಾರಿ ಪ್ರತಾಪ್ ಆಳ್ವ, ಶಾರದಾ ಯುವ ವೇದಿಕೆ ಕಾರ್ಯ ಪ್ರಮುಖರಾದ ಪ್ರಜ್ವಲ್ ಶೆಟ್ಟಿ ಕೊಡಾಜೆ, ಪ್ರಮೀತ್ ಶೆಟ್ಟಿ, ಯತೀಶ್ ಶೆಟ್ಟಿ, ಹರೀಶ್ ಕುಲಾಲ್, ದಿವಾಕರ್ ಕುಲಾಲ್, ರಾಜೇಶ್ ಕುಲಾಲ್ ಕೊಪ್ಪಳ, ರಾಜೇಶ್ ಶೆಟ್ಟಿ, ಕೇಶವ ಪೂಜಾರಿ,ನವೀನ್ ವಿಠಲಕೋಡಿ, ಅಶೋಕ್ ಶೆಟ್ಟಿ ಉದ್ದ ಹಾಗೂ ಶಾರದಾ ಯುವ ವೇದಿಕೆ ಸದಸ್ಯರು ಉಪಸ್ಥಿತರಿದ್ದರು.