ಬಂಟ್ವಾಳ : ಸೇವಾ ಭಾರತಿ ಬಂಟ್ವಾಳ ತಾಲೂಕು,
ಹಿಂದು ಜಾಗರಣ ವೇದಿಕೆ ಸರಪಾಡಿ ವಲಯ ಹಾಗೂ ಕಕ್ಕೆಪದವು ವಲಯ ಇದರ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ರಕ್ತನಿಧಿ ಲೇಡಿಗೋಶನ್ ಸರಕಾರಿ ಆಸ್ಪತ್ರೆ ಇದರ ಸಹಯೋಗದೊಂದಿಗೆ ತುರ್ತು ರಕ್ತದಾನ ಶಿಬಿರವೂ ಮುಲ್ಕಾಜೆ ಮಾಡ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಜು.4 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘ ಸಂಚಾಲಕರಾದ ಕಾಂತಪ್ಪ ಶೆಟ್ಟಿ ಕೊಡ್ಮಾಣ್ ನೆರವೇರಿಸಿದರು. ಈ ಸಂದರ್ಭದಲ್ಲಿ ಹಿಂಜಾವೇ ಜಿಲ್ಲಾ ನ್ಯಾಯಜಾಗರಣಾ ಸಂಯೋಜಕ್ ರಾಜೇಶ್ ಬೊಲ್ಲುಕಲ್ಲು, ಹಿಂದೂ ಯುವವಾಹಿನಿ ಜಿಲ್ಲಾ ಸಂಯೋಜಕ್ ಪ್ರಶಾಂತ್ ಕೆಂಪು ಗುಡ್ಡೆ, ಜಿಲ್ಲಾ ಕಾರ್ಯದರ್ಶಿ ಚಂದ್ರ ಕಲಾಯಿ, ತಾಲೂಕು ಗೌರವ ಅಧ್ಯಕ್ಷರಾದ ವಿಠಲ ಅಲ್ಲಿಪಾದೆ, ವಲಯ ಅಧ್ಯಕ್ಷರಾದ ನಾಗೇಶ್ ನೈಬೇಲು, ಶರ್ಮೀತ್ ಜೈನ್, ನವೀನ್ ವಗ್ಗ, ಸಂತೋಷ್ ಜೈನ್, ಯತೀಶ್ ಕಕ್ಕೆಪದವು, ಹಿರಿಯರಾದ ರುದ್ರಯ್ಯ ಆಚಾರಿ, ರೆಡ್ ಕ್ರಾಸ್ ಸಂಸ್ಥೆಯ ಪ್ರಮುಖರು ಪ್ರವೀಣ್ ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷರಾದ ಜಗದೀಶ್ ನೆತ್ತರಕೆರೆ, ಯೋಗಿಶ್ ತುಂಬೆ, ಶಿವಪ್ರಸಾದ್ ಧನುಪೂಜೆ, ಹರೀಶ್ ತಲೆಂಬಿಲ, ರವಿ ಕೆಂಪುಗುಡ್ಡೆ, ಶರಣ್ ಬಿಸಿರೋಡು, ತಿಲಕ್ ಅಮ್ಟಾಡಿ, ಪಂಚಾಯತ್ ಸದಸ್ಯರಾದ ರಾಮಕೃಷ್ಣ ಮಯ್ಯ, ಧರಣೇಂದ್ರ ಜೈನ್,ಶಾಂತಪ್ಪ ಪೂಜಾರಿಯವರ ಉಪಸ್ಥಿತಿಯಲ್ಲಿ ರಮೇಶ್ ವಗ್ಗ ಸ್ವಾಗತಿಸಿ, ಚಂದ್ರಹಾಸ ಶೆಟ್ಟಿ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ 86 ಕಾರ್ಯಕರ್ತರು ತುರ್ತು ರಕ್ತದಾನ ಮಾಡಿದರು.