ಪುತ್ತೂರು : ಭರತನಾಟ್ಯ ಕಲಾವಿದ ವಿದ್ವಾನ್ ಮಂಜುನಾಥ ಎನ್.ರವರರು ಭರತನಾಟ್ಯದಲ್ಲಿ ಹಲವು ಪರಿಕಲ್ಪನೆ ಇಟ್ಟುಕೊಂಡು 23 ನಿಮಿಷದಲ್ಲಿ ನಡೆಸಿರುವ 20 ವಿಭಿನ್ನ ತಾಳಪ್ರಯೋಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಶಾಸ್ತ್ರೀಯ ಕಲಾ ಪ್ರಕಾರದಲ್ಲಿ ಮಂಜುನಾಥ್‌ರವರ ದ್ವಿತಾಳ ಪ್ರಯೋಗದ ಸಾಧನೆ ಪ್ರಥಮವೆಂದು ಪರಿಗಣಿಸಲಾಗಿದೆ. ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿ ನಿವೃತ್ತ ಕನ್ನಡ ಉಪನ್ಯಾಸಕ ಜಿ.ಆರ್.ನರಸಿಂಹ ಭಟ್ ಮತ್ತು ಗಾಯತ್ರಿ ದಂಪತಿ ಪುತ್ರರಾದ ಇವರ ಕಲಬುರ್ಗಿಯಲ್ಲಿ ವಾಸವಾಗಿದ್ದಾರೆ.