ಪುತ್ತೂರು: ಯುವ ಕಾಂಗ್ರೆಸ್ ಪದಾಧಿಕಾರಿಗಳು ಬ್ಲಾಕ್ ಕಾಂಗ್ರೆಸ್ ನ ಸಲಹೆಯಂತೆ ಪಕ್ಷ ಸಂಘಟನಾ ಕೆಲಸ ನಡೆಸಬೇಕು, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರದ ಜನವಿರೋಧಿ ಆಡಳಿತದಿಂದ ದೇಶದಜನರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದು, ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಂಪೂರ್ಣ ವಿಫಲರಾಗಿರುವ ಬಿಜೆಪಿ ಸರಕಾರ ತನ್ನ ಅಸಡ್ಡೆ ನೀತಿಯಿಂದಾಗಿ ಅಮಾಯಕ ಜನರು ಅನ್ಯಾಯವಾಗಿ ಸಾವಿಗೀಡಾಗಿರುತ್ತಾರೆ, ಈ ರೋಗದಿಂದ ಹಲವಾರು ಜನರು ತತ್ತರಿಸಿರುತ್ತಾರೆ, ಜನರ ಸಂಕಷ್ಟಕ್ಕೆ ಯಾವುದೇ ಸ್ಪಂದನೆ ಮಾಡದ ಬಿಜೆಪಿ ಸರಕಾರ ಈ ಸಂಕಷ್ಟ ಸಮಯದಲ್ಲಿ ಅಗತ್ಯ ವಸ್ತುಗಳ ಬೆಲೆಗಳನ್ನು ಬೇಕಾಬಿಟ್ಟಿ ಏರಿಸಿ ಜನರನ್ನು ನರಕಕ್ಕೆ ತಳ್ಳಿರುತ್ತಾರೆ, ಜನರ ಬಗ್ಗೆ ಸ್ವಲ್ಪವೂ ದಯೆಯೇ ಇಲ್ಲದ ಕಟುಕ ಸರಕಾರದ ವಿರುದ್ದ ಯುವ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ನ ನಿಯೋಜಿತ ಅಧ್ಯಕ್ಷ ಮಹಮ್ಮದ್ ನಳಪಾಡ್ ರವರು ಆಗ್ರಹಿಸಿದರು.
ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ನ ಸದಸ್ಯರು ಬಿಜೆಪಿ ಸರಕಾರದ ವಿರುದ್ದ ಯುವ ಜನತೆಯನ್ನು ಸಂಘಟಿಸುವ ಕೆಲಸ ನಡೆಸಬೇಕು, ಹಾಗೂ ಕೊರೊನಾ ಸೋಂಕಿತರ ಸಹಾಯಕ್ಕೆ ಯುವ ಕಾಂಗ್ರೆಸ್ ನವರು ನಿಲ್ಲಬೇಕು ಎಂದು ಹೇಳಿದರು.
ಪ್ರತಿಭಟನೆ ರ‍್ಯಾಲಿಯಲ್ಲಿ ಭಾಗವಹಿಸಿರುವುದು ನನಗೆ ಅತೀವ ಸಂತಸ ತಂದಿದೆ, ಅತ್ಯಂತ ಯಶಸ್ವಿಯಾಗಿ ಸ್ಯೆಕಲ್ ರ‍್ಯಾಲಿಯನ್ನು ಸಂಘಟಿಸಿರುವ ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಮುಖಂಡರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಪ್ರಥಮ ಬಾರಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಮಹಮ್ಮದ್ ನಲಪಾಡ್ ರವರನ್ನು ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ,ದ ಕ ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಮ್ ಡಿ ಸೋಜಾ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಗೊನ್ಸಾಲ್ವಿಸ್, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಕಾರ್ಯದರ್ಶಿ ಮನಮೋಹನ್ ರೈ ಕಾರ್ಯದರ್ಶಿ ಹಬೀಬ್ ಕಣ್ಣೂರು, ಕಛೇರಿ ಕಾರ್ಯದರ್ಶಿ ಸಿರಿಲ್ ರೋಡ್ರಿಗಸ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷದ್ ದರ್ಬೆ, ಎ ಪಿ ಎಂ ಸಿ ನಿರ್ದೇಶಕ ಶುಕುರು ಹಾಜಿ, ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ನಗರ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷೆ ವಿಲ್ಮಗೊನ್ಸಾಲ್ವಿಸ್ , ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾದ ಶಾರದಾ ಅರಸ್, ಸನಮ್ ನಜಿರ್, ಪ್ರತೀಕ ಪೂರ್ಣೇಶ್, ನಗರ ಸಭಾ ಸದಸ್ಯ ರಿಯಾಜ್ ಪರ್ಲಡ್ಕ, ಶ್ರೀಮತಿ ಶೈಲ ಪೈ, ನ್ಯಾಯವಾದಿ ಸಾಯಿರಾ ಝುಬೈರ್, ಮಾಜಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಲಾವತಿ ಎಸ್ ಗೌಡ, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೋನ್ ಸಿಕ್ವೇರಾ, , ಆಸಂಗಟಿತ ಕಾರ್ಮಿಕ ಘಟಕದ ಬ್ಲಾಕ್ ಅಧ್ಯಕ್ಷ ಮೇಲ್ವಿನ್ ಮೊಂತೆರೋ, , ಪಾಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಬು ರೈ ಕೋಟೆ, ಕಾರ್ಯದರ್ಶಿ ಶಾಹುಲ್ ಹಮೀದ್ ಜಾಲಗದ್ದೆ, ನರಿಮೊಗ್ರು ವಲಯ ಅಧ್ಯಕ್ಷ ಪ್ರಕಾಶ ಪುರುಷರಕಟ್ಟೆ, ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಪಾಣಾಜೆ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್, ಅರ್ಲಪದವು, ಗಿರೀಶ್ ಗೋಲ್ವಾಳ್ಕರ್, ಯಂಗ್ ಬ್ರಿಗೇಡ್ ನ ರಂಜಿತ್ ಬಂಗೇರ, ಅಭಿಷೇಕ್ ಬೆಳ್ಳಿಪ್ಪಾಡಿ, ಶರೀಫ್ ಬಲ್ನಾಡ್,ವಿದ್ಯಾರ್ಥಿ ಕಾಂಗ್ರೆಸ್ ನ ಬಾತಿಶ್ ಆಳಕೆ ಮಜಲು, ತಮೀಜ್ ಕೋಲ್ಪೆ, ಕಾಂಗ್ರೆಸ್ ಕಾರ್ಯಕರ್ತರಾದ ಆರ್ ಪಿ ಅಬ್ದುಲ್ ರಝಕ್ ಪಡೀಲ್, ಸಿನಾನ್ ದರ್ಬೆ,ಡೆನ್ನಿಸ್ ಕುಟ್ಟಿ ಉಪಸ್ಥಿತರಿದ್ದರು.
ದ.ಕ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಮಹಮ್ಮದ್ ಬಡಗನ್ನೂರು ರವರು ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲಾ ರಾಮಚಂದ್ರರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್, ಮಹಮ್ಮದ್ ಅಲಿ ವಂದಿಸಿದರು.