ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಸಂಪುಟದಿಂದ ಡಿ.ವಿ. ಸದಾನಂದ ಗೌಡ ಅವರು ಹೊರ ಹೋಗುತ್ತಿದ್ದಂತೆ, ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದಾರೆನ್ನಲಾದ ವೀಡಿಯೊವೊಂದು ವೈರಲ್ ಆಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಗ್ರಾಮ ಪಂಚಾಯತ್ ಅಧ್ಯಕ್ಷರವರೆಗೆ ಎಲ್ಲಾ ರಾಜಕಾರಣಿಗಳ ಮನೆಗೂ ರೈಡ್ ಆಗಲಿ ಎಂದು ಡಿ.ವಿ. ಸದಾನಂದ ಗೌಡ ಹೇಳಿದ ವೀಡಿಯೋ ಇದಾಗಿದೆ.
“ರಾಜಕೀಯ ಎಂದರೆ ವ್ಯಾಪಾರ. ರಾಜಕೀಯದಲ್ಲಿ ಬರೀ ತಿನ್ನೋದೇ ಆಗಿದೆ. ಹಣ ಹಾಕು, ಹಣ ವಾಪಾಸ್ ತೆಗಿ. ಇದಕ್ಕೆ ಬಿಜೆಪಿ ಕೂಡ ಹೊರತಾಗಿಲ್ಲ. ಎಲ್ಲಾ ಪಕ್ಷದಲ್ಲೂ ಇಂತಹ ರಾಜಕಾರಣ ನಡೆಯುತ್ತಿದೆ. ಹಾಗೆಂದು ಎಲ್ಲರೂ ಎಂದು ಹೇಳುತ್ತಿಲ್ಲ. ಎಲ್ಲಾ ಪಕ್ಷಗಳಲ್ಲೂ ಶೇ. ೨೫ರಷ್ಟು ಮಂದಿ ಒಳ್ಳೆಯವರು ಇದ್ದಾರೆ. ಉಳಿದ ಶೇ. ೭೫ರಷ್ಟು ಮಂದಿ ಹಣ ಮಾಡುವುದರಲ್ಲೇ ತೊಡಗಿದ್ದಾರೆ. ಬಾಡೂಟ ಹಾಕಿದರೆ ಮಾತ್ರ ಓಟು ಹಾಕುತ್ತಾರೆ. ಪ್ರಾಮಾಣಿಕ ರಾಜಕಾರಣಿಗಳಿಗೆ ಅವಕಾಶ ಇದೆಯೇ? ಕರ್ನಾಟಕದಲ್ಲೂ ಇಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗುತ್ತಿದೆ. ಜನ ಎಚ್ಚೆತ್ತುಕೊಳ್ಳಬೇಕು. ಜನ ಎಚ್ಚೆತ್ತುಕೊಳ್ಳದೇ ಹೋದರೆ, ಏನೂ ಆಗಲ್ಲ” ಎಂದು ವೀಡಿಯೋದಲ್ಲಿ ದಾಖಲಾಗಿದೆ.
‘ರಾಜಕೀಯದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗುತ್ತಿದೆ. ಚುನಾವಣೆಗೆ ನಿಲ್ಲುವುದೇಕೊಳ್ಳೆ ಹೊಡೆಯಲು ಎಂಬಂತಾಗಿದೆ. ಪ್ರಧಾನಿ ಮೋದಿಯಿಂದ ಹಿಡಿದುಗ್ರಾಮ ಪಂಚಾಯತ್ ಅಧ್ಯಕ್ಷನ ಮನೆಗೂ ರೈಡ್ ಆಗಬೇಕು’ ಎಂದುಡಿ.ವಿ.ಸದಾನಂದ ಗೌಡರು ಹೇಳಿದ್ದಾರೆ ಎಂದು ಪಬ್ಲಿಕ್ ಟಿ.ವಿ.ಯಲ್ಲಿಪ್ರಸಾರವಾದ ರೀತಿಯಲ್ಲಿ ವರದಿಯೊಂದು ಸಾಮಾಜಿಕ ಜಾಲ ತಾಣಗಳಲ್ಲಿವೈರಲ್ ಆಗಿತ್ತು. ಆದರೆ ಇದು ಫೇಕ್ ನ್ಯೂಸ್ ಎಂದು ತಿಳಿದು ಬಂದಿದೆ.