ಮಂಗಳೂರು: ಕೋವಿಡ್-19 ಕುರಿತಂತೆ ಸರಕಾರದ ಹೊಸ ಮಾರ್ಗಸೂಚಿಯ ಪ್ರಕಾರ ಕೇರಳ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಗೆ ಬರುವ ಪ್ರಯಾಣಿಕರನ್ನು ತಪಾಸಣೆ ನಡೆಸುವ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಚೆಕ್ ಪೋಸ್ಟ್‌ಗಳಲ್ಲಿ ಕೋವಿಡ್-19 ಮಾರ್ಗಸೂಚಿಯನ್ವಯ ವ್ಯಾಕ್ಸಿನೇಷನ್ ವರದಿ , ಕೊವೀಡ್ ನೆಗೆಟಿವ್ ವರದಿ ತಪಾಸಣೆ ಮಾಡಲಾಗುವುದು ಮತ್ತು ಅವಶ್ಯವಿದ್ದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗುವುದು ಎಂದರು.
ಚೆಕ್ ಪೋಸ್ಟ್ ಗಳ ವಿವರ:
- ವಿಟ್ಲ: ಸಾರಡ್ಕ, ಸಾಲೆತ್ತೂರು,ಕನ್ಯಾನ
- ಪುತ್ತೂರು ಗ್ರಾಮಾಂತರ: ಮೇನಾಲ,ಸ್ವರ್ಗ,ಸುಳ್ಯ ಪದವು,
- ಸುಳ್ಯ: ಮೂರೂರು,ಮಂಡೆಕೋಲು,ಬಡ್ಡಡ್ಕ,ಕನ್ನಡಿತೋಡು