ಪುತ್ತೂರು : ಎಳ್ಮುಡಿ ಪ್ರಾವಿಡೆನ್ಸ್ ಪ್ಲಾಜಾದಲ್ಲಿ ನೂತನವಾಗಿ ಶುಭಾರಂಭಗೊಳ್ಳುತ್ತಿರುವ ಸಲೂನ್ ಮತ್ತು ಸ್ಪಾ “ದ ಓಯಸಿಸ್” ಇದರ ಉದ್ಘಾಟನಾ ಕಾರ್ಯಕ್ರಮವೂ ಜು.15 ರಂದು ನಡೆಯಲಿದೆ.
ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿ, ಪುತ್ತೂರು ಕಂಬಳ ಸಮಿತಿ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ನಡುಬೈಲು, ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಪುತ್ತೂರು ನಗರಸಭಾ ಉಪಾಧ್ಯಕ್ಷೆ ಶ್ರೀಮತಿ ವಿದ್ಯಾ ಆರ್. ಗೌರಿ, ಪುತ್ತೂರು ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಶ್ವೇತಾ ಕಿರಣ್, ಜೆಕೆ ಕನ್ಸ್ಟ್ರಕ್ಷನ್ಸ್ ನ ಜಯಕುಮಾರ್ ನಾಯರ್, ಅಶ್ವಿನಿ ಬಾರ್ ಮತ್ತು ರೆಸ್ಟೋರೆಂಟ್ ಮಾಲಕರಾದಂತಹ ಅಶ್ವಿನ್ ರೈ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸಹಜ್ ರೈ ಬಳಜ್ಜ,ಉದ್ಯಮಿ ಶಿವರಾಮ ಆಳ್ವ, ತುಳು ಚಿತ್ರ ನಟಿ ನಿರೀಕ್ಷಾ ಶೆಟ್ಟಿ ಹಾಗೂ ನಟಿ ದ್ರವ್ಯ ಶೆಟ್ಟಿ ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.