ನೆಟ್ಟಣಿಗೆ ಮುಡ್ನೂರು : ನಾವು ಉದ್ಯೋಗ ಖಾತರಿಯ ಕೆಲಸ ಮಾಡಿಸುವಾಗ ಹಾಗೂ ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡುವಾಗ ಹಾಗೂ ಯಾವುದೇ ಸರಕಾರಿ ಸೌಲಭ್ಯ ಪಡೆಯುವಾಗ ನಿಮಗೆ ಸರಕಾರದ ಸಂಬಳ ಪಡೆಯುವ ಯಾವನೇ ಒಬ್ಬ ಅಧಿಕಾರಿ ಆ ನಿಮ್ಮ ಕೆಲಸ ಮಾಡಿ ಕೊಟ್ಟ ಎನ್ನುವ ಕಾರಣಕ್ಕೆ ನೀವು ಆತನಿಗೆ ಯಾವುದೇ ರೀತಿಯಲ್ಲಿ ಸರಕಾರಕ್ಕೆ ಕಟ್ಟುವ ಹಣಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡುವಂತಿಲ್ಲ, ನೀಡುವ ಅಗತ್ಯವೂ ಕೂಡ ಇಲ್ಲ ನಾವು ಗಮನಿಸಿದಂತೆ ಕೆಲವರು ತಮ್ಮ ಕೆಲಸ ಆದಾಗ ಅಧಿಕಾರಿಗಳಿಗೆ ದುಡ್ಡು ನೀಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ ಇದರಿಂದಾಗಿ ಬಡ ಜನರಿಗೆ ಸಮಸ್ಯೆ ಆಗುತ್ತದೆ ನೀವು ಹಣ ಇರುವ ಕಾರಣಕ್ಕಾಗಿ ನೀಡುತ್ತೀರ ಆದರೆ ಬಡವರಲ್ಲಿ ನಿಮ್ಮಷ್ಟು ಹಣ ಇಲ್ಲ ಆದರೆ ನೀವು ಸರಕಾರಿ ಅಧಿಕಾರಿಗಳಿಗೆ ಇದೇ ರೀತಿಯ ಅಭ್ಯಾಸ ಮಾಡಿದರೆ ಅದು ತೀರಾ ಸಂಕಷ್ಟದಲ್ಲಿರುವವರಿಗೆ ಸಮಸ್ಯೆಯಾಗುತ್ತದೆ ಹಾಗೂ ನೀವೇ ಅವರಿಗೆ ಲಂಚದ ರುಚಿ ತೋರಿಸಿದಂತಾಗುತ್ತದೆ ಆದ್ದರಿಂದ ನಾವು ಯಾವುದೇ ಸರಕಾರದ ಕೆಲಸ ಮಾಡಿಸುವಾಗ ಯಾವುದೇ ಅಧಿಕಾರಿಗಳಿಗೆ ನಯಾ ಪೈಸೆಯೂ ನೀಡುವುದು ಬೇಡ ಎಂಬ ತೀರ್ಮಾನ ಮಾಡಿಕೊಳ್ಳೋಣ ಎಂದು ಗ್ರಾಮ ಪಂಚಾಯತ್ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾವು ನೀವು ಕಟ್ಟಿದ ತೆರಿಗೆಯ ಹಣದಿಂದಲೇ ಅವರು ಸಂಬಳ ಪಡೆಯುತ್ತಿದ್ದಾರೆ. ಸರಕಾರದ ಕೆಲಸ ಮಾಡಿಸುವಾಗ ಯಾವುದೇ ಅಧಿಕಾರಿಗಳಿಗೆ ನಯಾ ಪೈಸೆಯನ್ನು ಕೂಡ ನೀಡಬೇಡಿ ದುಡ್ಡು ನೀಡಿಲ್ಲ ಎಂಬ ಕಾರಣಕ್ಕೆ ನಿಮ್ಮ ಕೆಲಸ ಮಾಡಿ ಕೊಡಲಿಲ್ಲ ಎಂದಾದರೆ ನಮ್ಮ ಸಂಪರ್ಕ ಮಾಡಿ ಕಾನೂನು ಪ್ರಕಾರ ನಿಮ್ಮ ಕೆಲಸ ಮಾಡಿಸಿ ಕೊಡುವ ಜವಾಬ್ದಾರಿ ನಮ್ಮದು ಎಂದು ಅವರು ತಿಳಿಸಿದ್ದಾರೆ.
ಚಂದ್ರಹಾಸ ಈಶ್ವರಮಂಗಲ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ 9916242169
ಪ್ರದೀಪ್ ಕುಮಾರ್ ರೈ ಕರ್ನೂರು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ 6363304711