ವಿಟ್ಲ : ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಹೊಳೆಯ ಸುರುಂಬಡ್ಕ ಕಿರು ಸೇತುವೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮುಳುಗಡೆಯಾಗಿದೆ.
ಕಳೆದ ಬಾರಿಯ ಮಳೆಗೆ ಎರಡು ಬಾರಿ ಕಿಂಡಿ ಅಣೆಕಟ್ಟು ಮುಳುಗಡೆಯಾಗಿತ್ತು. ಇದರಿಂದ ಸುತ್ತಮುತ್ತಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಹಿಂದಿನ ಶಾಸಕಿ ಶಕುಂತಾಳ ಶೆಟ್ಟಿ ಅವರ ಮೂಲಕ ಒಂದು ಕೋಟಿ ರೂಪಾಯಿ ಅನುದಾನದಲ್ಲಿ ಈ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿತ್ತು. ಕಳೆದ ವರ್ಷ ಈ ಹೊಳೆಯಲ್ಲಿ ಕೊಚ್ಚಿಕೊಂಡು ಬರುತ್ತಿರುವ ಕಸ, ಮರದ ಕೊಂಬೆ, ದಿಮ್ಮಿಗಳು ಸೇರಿಕೊಂಡಿದ್ದು, ಇದರ ಸೇತುವೆಗೆ ಹಾಕಲಾದ ರಾಡ್ ಗಳು ಕೊಚ್ಚಿಕೊಂಡು ಹೋಗಿ ಹಾನಿಯಾಗಿತ್ತು.