ಪುತ್ತೂರು- ಡಿಸೆಂಬರ್ 9, ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ವಿವೇಕಾನಂದ ಬಿ.ಎಡ್ ಕಾಲೇಜು ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಆನ್ಲೈನ್ ಕಾರ್ಯಾಗಾರವನ್ನು ಪುತ್ತೂರಿನಸಹಾಯಕ ಆಯುಕ್ತರಾದ ಡಾ. ಯತೀಶ್ ಉಳ್ಳಾಲ್ ಇವರು ರೋಟರಿ ಮಾನೀಶ ಸಭಾಂಗಣದಲ್ಲಿ ನಡೆಸಿಕೊಟ್ಟರು.
ಪುತ್ತೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಓರ್ವ ಸಹಾಯಕ ಆಯುಕ್ತರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವತಯಾರಿಯ ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟ ಗೌರವ ಡಾ. ಯತೀಶ್ ಉಳ್ಳಾಲ್ ಇವರಿಗೆ ಸಲ್ಲುತ್ತದೆ.ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ತಮ್ಮ ಜೀವನದ ಮೂರು ವರ್ಷಗಳನ್ನು ಇನ್ವೆಸ್ಟ್ಮೆಂಟ್ ಎಂದು ತಿಳಿದುಕೊಂಡು ವಿಚಲಿತರಾಗದೆ ಅಧ್ಯಯನ ಮಾಡಿದಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿ ಉತ್ತಮ ಸರ್ಕಾರಿ ಉದ್ಯೋಗ ದೊರಕುತ್ತದೆ ಹಾಗೂ ನಿಶ್ಚಿಂತೆಯಿಂದ ಜೀವನ ಮಾಡಬಹುದು ಎಂದ ಅವರು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಾಲ್ಕು ವಿಭಾಗಗಳಿವೆ ಹಾಗೂ 250 ಅಂಕಗಳಿಗೆ ಉತ್ತರ ಬರೆಯಲು ಮೂರು ಗಂಟೆ ಕಾಲಾವಕಾಶ ಇರುತ್ತದೆ. ಸುಮಾರು ಮೂರು ಸಾವಿರ ಪದಗಳಲ್ಲಿ ಉತ್ತರವನ್ನು ಬರೆಯಬೇಕಾಗುತ್ತದೆ, ಅಂದರೆ ಪ್ರತಿ ಆರು ನಿಮಿಷದಲ್ಲಿ ನೂರು ಪದಗಳನ್ನು ಬರೆಯಲು ಅಭ್ಯಾಸವನ್ನು ಮಾಡಿಕೊಳ್ಳಬೇಕಾಗುತ್ತದೆ.
ಮುಂದಿನ ಎರಡು ವರ್ಷಗಳ ನಂತರ ನಡೆಯುವ ಪರೀಕ್ಷೆಗಾಗಿ ಇಂದಿನಿಂದಲೇ ಪೂರ್ವ ತಯಾರಿಯನ್ನು ಮಾಡ ಬೇಕಾಗುತ್ತದೆ. ಇದೊಂದು ಟೆಸ್ಟ್ ಮ್ಯಾಚ್ ಇದ್ದ ಹಾಗೆ , ಅಲ್ಲದೆ ಪ್ರೌಢಶಾಲೆಯಲ್ಲಿ ಪಿ.ಯು.ಸಿ ಯಲ್ಲಿ ಹಾಗೂ ಡಿಗ್ರಿಯಲ್ಲಿ ಬಂದಿರುವ ಸಿಲಬಸ್ ಗಳು ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ.ತಾನು ಪರೀಕ್ಷೆಗೆ ತಯಾರಿ ನಡೆಸುವ ಸಂದರ್ಭದಲ್ಲಿ, ಪರೀಕ್ಷೆಗೆ ಎರಡು ವರ್ಷ ಮುನ್ನವೇ ಅಧ್ಯಯನವನ್ನು ಪ್ರಾರಂಭಿಸಿ, ಪ್ರತಿಯೊಂದು ಪುಸ್ತಕವನ್ನು ಕನಿಷ್ಠ ಇಪ್ಪತ್ತು ಬಾರಿಯಾದರೂ ಓದಿಸುತ್ತೇನೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಗಮನವಿಟ್ಟು ಓದಬೇಕು, ಓದಿದ್ದನ್ನು ಮನಸ್ಸಿನಲ್ಲಿ ಉಳಿಸಬೇಕು ಹಾಗೂ ಪರೀಕ್ಷೆಯ ಸಂದರ್ಭದಲ್ಲಿ ಅದನ್ನು ನೆನಪಿಸಿ ಬರೆದರೆ ಯಶಸ್ಸು ತನ್ನಷ್ಟಕ್ಕೆ ಒದಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರುಯಾವುದೇ ಪದವೀಧರರು UPSC ಪರೀಕ್ಷೆಯನ್ನು ಬರೆಯ ಬಹುದು, ತೇರ್ಗಡೆಯಾದರವರಿಗೆ ಭಾರತದ ಯಾವುದೇ ಪ್ರದೇಶದಲ್ಲಿ ಉದ್ಯೋಗ ಸಿಗುವ ಸಾಧ್ಯತೆಗಳು ಇದೆ ಆದ್ದರಿಂದ ಭಾರತದ ಪ್ರತಿಯೊಂದು ಪ್ರದೇಶದ ಅರಿವು ಮತ್ತು ಅಧ್ಯಯನ ಅತ್ಯಗತ್ಯ.ಈ ಸಂದರ್ಭದಲ್ಲಿ ಅಧ್ಯಯನಕ್ಕಾಗಿ ಟೈಮ್ ಮೆನೇಜ್ಮೆಂಟ್ ಮಾಡುವುದು ಹೇಗೆ ಎಂದು ವಿದ್ಯಾರ್ಥಿಯೊಬ್ಬರು ಪ್ರಶ್ನೆ ಮಾಡಿದಾಗ, ಬೆಳಗ್ಗೆ 5.30 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಅಧ್ಯಯನ ಮಾಡಬೇಕು ಹಾಗೂ ಏಕಕಾಲದಲ್ಲಿ ಕನಿಷ್ಠ 30 ನಿಮಿಷ ಹಾಗೂ ಗರಿಷ್ಠ 90 ನಿಮಿಷದ ಅಧ್ಯಯನ ಮಾಡಲೇ ಬೇಕು ಎಂದು ಉತ್ತರಿಸಿದರು.ಇನ್ನೋರ್ವ ವಿದ್ಯಾರ್ಥಿ ಸ್ಪರ್ಧಾತ್ಮಕ ಪರೀಕ್ಷೆಗೆ ವಿಶೇಷ ಕೋಚಿಂಗ್ ಅನ್ನು ಪಡೆಯಬೇಕೆ? ಎಂದು ಕೇಳಿದಾಗ ಅಗತ್ಯವಿದ್ದಲ್ಲಿ ಪಡೆಯಬಹುದು ಇಲ್ಲವಾದಲ್ಲಿ ತಾವೇ ಸ್ವತಹ ಮಾಡಿಕೊಂಡ self-made ನೋಟ್ಸ್ ನಮಗೆ ಅತ್ಯಂತ ಉಪಯುಕ್ತ ಮಾಹಿತಿಯಾಗಿರುತ್ತದೆ ಎಂದು ಉತ್ತರಿಸಿದರು.ಕಾರ್ಯಗಾರದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸುಮಾರು 85 ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡರು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಯಾವುದೇ ಗೊಂದಲಗಳು ಇದ್ದಲ್ಲಿ ನೇರವಾಗಿ ನನ್ನ ಕಚೇರಿಗೆ ಬಂದು ಸಂಪರ್ಕ ಮಾಡಿದಲ್ಲಿ ಮಾರ್ಗದರ್ಶನ ನೀಡುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.ಸ್ಪರ್ಧಾತ್ಮಕ ಪರೀಕ್ಷೆಯ ವಿವರಗಳು ಬೇಕಾದಲ್ಲಿ ssc.in ಲಭ್ಯವಿದೆ ಎಂದರು.ಪುತ್ತೂರಿನ ಸಹಾಯಕ ಆಯುಕ್ತರಾಗಿರುವ ಡಾ. ಯತೀಶ್ ಉಳ್ಳಾಲ್ ಇವರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿ. ಇವರು ಪುತ್ತೂರಿನ ಜನಸಾಮಾನ್ಯರಿಗೆ ತುಂಬಾ ಅಚ್ಚುಮೆಚ್ಚಿನವರು. ಯಾಕೆಂದರೆ ಯಾವುದೇ ಸಂದರ್ಭದಲ್ಲೂ ಪುತ್ತೂರಿನ ನಾಗರಿಕರಿಗೆ ಸುಲಭದಲ್ಲಿ ಸಂಪರ್ಕಕ್ಕೆ ಸಿಗುವಂತಹ ವ್ಯಕ್ತಿತ್ವ ಇವರದು. ಇವರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬೆಳೆದು ಬಂದಿರುವಂತಹ ವ್ಯಕ್ತಿ.ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಅತ್ಯಂತ ಕಡಿಮೆ ಡಾ. ಯತೀಶ್ ಉಳ್ಳಾಲ್ ಅವರು ಯಾವುದೇ ವಿಶೇಷ ಕೋಚಿಂಗ್ ಪಡೆಯದೆ ಸ್ವತಃ ತಾವೇ ಅಧ್ಯಯನ ಮಾಡಿ ಸ್ನೇಹಿತ ಮಂಜುನಾಥ್ ಎಂಬವರ ಜೊತೆ ಗ್ರೂಪ್ ಸ್ಟಡಿ ಮಾಡಿ 2014ರಲ್ಲಿ ಕೆ.ಎ.ಎಸ್ ಪರೀಕ್ಷೆಯಲ್ಲಿ ಎಂಟನೇ ರಾಂಕ್ ಅನ್ನು ಪಡೆದು A ಗ್ರೂಪಿನ ಸಹಾಯಕ ಆಯುಕ್ತರ ಹುದ್ದೆಗೆ ಆಯ್ಕೆಯಾಗಿ ಜಿಲ್ಲೆಗೆ ಗೌರವ ತಂದಿರುವಂತಹ ವ್ಯಕ್ತಿ.ಅಲ್ಲದೆ…2015ರಲ್ಲಿ ರಸಾಯನಶಾಸ್ತ್ರದಲ್ಲಿ ಪಿಎಚ್ಡಿ ಪದವಿಯನ್ನು ಸಹ ಪಡೆದಿದ್ದಾರೆ.ಕೊರೋನಾ ತುರ್ತು ಸಂದರ್ಭದಲ್ಲೂ ನನ್ನ ಪ್ರಾಣವನ್ನು ಪಣವಾಗಿಟ್ಟು ಪುತ್ತೂರು ತಾಲೂಕಿನ ನಾಗರಿಕರ ಹಿತದೃಷ್ಟಿಯಿಂದ ಉತ್ತಮ ಸೇವೆಯನ್ನು ನೀಡಿ ಪುತ್ತೂರಿನಲ್ಲಿ ಕರೋನವನ್ನು ನಿಯಂತ್ರಣಕ್ಕೆ ತರುವಲ್ಲಿ ಇವರ ಶ್ರಮ ಅಪಾರ.ಇವರ ಈ ಪ್ರಾಮಾಣಿಕ ಸೇವೆಯನ್ನು ಹಾಗೂ ತಮ್ಮ ಕೆಲಸ ಕಾರ್ಯಗಳನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಪ್ರಧಾನ ಮಂತ್ರಿಗಳು ಗುರುತಿಸುವಂತಾಗಲಿ ಎಂದು ಪುತ್ತೂರಿನ ಜನತೆಯ ಹಾರೈಕೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಕಾರ್ಯಗಾರವನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ನಡೆಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಉಮೇಶ್ ನಾಯಕ್ ಅವರು ತಿಳಿಸಿದರು.ರೋಟರಿ ಕ್ಲಬ್ ಪುತ್ತೂರು ಯುವ ಇದರ ಅಧ್ಯಕ್ಷರಾದ ಹರ್ಷಕುಮಾರ್ ರೈ ಸ್ವಾಗತಿಸಿದರು, ವಿವೇಕಾನಂದ ಬಿಎಡ್ ಕಾಲೇಜಿನ ಅಧ್ಯಕ್ಷರಾದ ಪ್ರೊ. ಎ. ವಿ ನಾರಾಯಣ್ ಇವರು ಶುಭಾಶಂಸನೆಗೈದರು, ಕಾಲೇಜಿನ ಸಹಪ್ರಾಧ್ಯಾಪಕಿ ಶ್ರೀಮತಿ ಭುವನೇಶ್ವರಿ ಅವರು ಮಾನ್ಯ ಸಹಾಯಕ ಆಯುಕ್ತರ ಪರಿಚಯವನ್ನು ಮಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತಾ ಸತೀಶ್ ವಂದನಾರ್ಪಣೆಗೈದರು. ಕುಮಾರಿ ಸೌಮ್ಯ, ಅಗಮ್ಯ ಹಾಗೂ ಶರತ್ ಶ್ರೀನಿವಾಸ್ ತಾಂತ್ರಿಕ ಸಹಕಾರ ನೀಡಿದರು. ಕಾರ್ಯದರ್ಶಿ ಉಮೇಶ್ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.