ವಿಟ್ಲ : ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿಯಿಂದ ಕಳ್ಳತನಕ್ಕೆ ಯತ್ನ ನಡೆಸಿದ ಘಟನೆ ಜು.17 ರಂದು ಬೆಳಗ್ಗೆ ಬೆಳಕಿಗೆ ಬಂದಿದೆ ಹಾಗೂ ಈ ಬಗ್ಗೆ. ವಿಟ್ಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಶೇಖರ್ ಪೂಜಾರಿ ರವರು ಎಂದಿನಂತೆ ಕೆಲಸ ಮುಗಿಸಿ ಜು.16 ರಂದು ಕಚೇರಿಯ ಜವಾನ್ ಬಾಲಕೃಷ್ಣ ರವರೊಂದಿಗೆ ಭೀಗ ಹಾಕಿ ತೆರಳಿದ್ದು ಮರುದಿನ ಬೆಳಗ್ಗೆ 9.30 ರ ಸುಮಾರಿಗೆ ಕಚೇರಿ ಬೀಗ ತೆಗೆದು ಒಳಗೆ ಪ್ರವೇಶಿಸಿದಾಗ ಸೊಸೈಟಿ ಯ ಮಹಡಿಯ ಹಂಚನ್ನು ತೆಗೆದು ಒಳಗಡೆ ನುಗ್ಗಿ ಕಪಾಟಿನ ಬಾಗಿಲು ತೆಗೆದ ರೀತಿಯಲ್ಲಿ ಇದ್ದುದು ಬೆಳಕಿಗೆ ಬಂದಿದೆ.
ಸದ್ಯ ಕಳ್ಳರು ಕಳ್ಳತನ ನಡೆಸಲು ಬಂದಿದ್ದು ಯಾವುದೇ ಹಣ ಬೆಲೆ ಬಾಳುವ ವಸ್ತು,ಚಿನ್ನ ಸಿಗದೆ ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ನಡೆದಿದೆ.
ಈ ಬಗ್ಗೆ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ದೂರು ನೀಡಿದ್ದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.