ಪುತ್ತೂರು: ನಿರಂತರ ಸುರಿದ ಮಳೆಯಿಂದಾಗಿ ಬನ್ನೂರು ಗ್ರಾಮದ ಸೇಡಿಯಾಪು ಕಜೆ ದೇವಿನಗರ ಎಂಬಲ್ಲಿ ಸಂತೋಷ್ ಕುಲಾಲ್ ಅವರ ಮನೆಯ ಆವರಣ ತಡೆಗೋಡೆ ಕುಸಿದು ಮನೆಯು ಅಪಾಯದ ಅಂಚಿನಲ್ಲಿರುವ ಮಾಹಿತಿ ತಿಳಿದು ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಜು.18 ರಂದು ಭೇಟಿ
ನೀಡಿದ್ದಾರೆ.
ಮನೆ ಪಕ್ಕದ ತಡೆಗೋಡೆ ಕುಸಿದು ಹೋದ ಜಾಗವನ್ನು ನೋಡಿದ ಬಳಿಕ ಅವರು ಪತ್ರಿಕಾ ಮಾಧ್ಯಮದವರೊಂದಿಗೆ
ಮಾತನಾಡಿ, ಸಂತೋಷ್ ಅವರ ಮನೆ ತಡೆಗೋಡೆ ಕುಸಿದು ಹೋಗಿದ್ದು ಮನೆಯೂ ಬೀಳುವ ಸ್ಥಿತಿಯಲ್ಲಿದೆ. ತಡೆಗೋಡೆ ನಿರ್ಮಾಣಕ್ಕೆ ಸುಮಾರು 8 ಲಕ್ಷ ರೂ. ವೆಚ್ಚ ತಗಲಲಿದ್ದು, ಸರಕಾರ ಮತ್ತು ಸ್ಥಳೀಯರ ಸಹಕಾರದೊಂದಿಗೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರಲ್ಲದೆ, ಈ ಭಾಗಕ್ಕೆ ಎಲ್ಲಾ ರಾಜಕೀಯ ಪಕ್ಷದ ನಾಯಕರು ಭೇಟಿ ನೀಡಿದರೂ ಸರಿಯಾದ ಸ್ಪಂದನೆ ಸಿಗಲಿಲ್ಲ ಎಂಬ ಮಾಹಿತಿ
ಸ್ಥಳೀಯರು ನೀಡಿದ್ದಾರೆ. ಹಾಗಾಗಿ ಇಲ್ಲಿನ ನಾಗಕರಿಕರ ಕೋರಿಕೆ ಮೇರೆಗೆ ನಾನು ಬಂದಿದ್ದೇನೆ. ಸರಕಾರ ಮತ್ತು ಸ್ಥಳೀಯರ ಸಹಕಾರದೊಂದಿಗೆ ತಡೆಗೋಡೆ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜಯಪ್ರಕಾಶ್ ಬದಿನಾರು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.