ಕನ್ಯಾಡಿ: ಇಲ್ಲಿಯ ಗುರಿಪಳ್ಳ ಗೋಳಿತೊಟ್ಟು ಮನೆಯ ನಾರಾಯಣ ಪೂಜಾರಿ ಯವರ ಪುತ್ರ ಕಾರ್ತಿಕ್ ಪೂಜಾರಿ(22.ವ) ರವರು ಮನೆಯ ಪಕ್ಕದ ರಬ್ಬರ್ ತೋಟದಲ್ಲಿ ರಬ್ಬರ್ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು. 19 ಬೆಳಕಿಗೆ ಬಂದಿದೆ.
ಕಾರ್ತಿಕ್ ರವರು ರಾತ್ರಿ ಮನೆಯವರೊಂದಿಗೆ ಇದ್ದು ಇವರುಗಳ ಮಧ್ಯೆ ಸಣ್ಣ ಪುಟ್ಟ ಮಾತುಕತೆ ನಡೆದಿತ್ತು. ಬಳಿಕ ಅವರು ಮನೆಯಿಂದ ಹೊರಟು ಹೋದವರು ಇಂದು ಬೆಳಿಗ್ಗೆ ಮನೆಯ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯಾವ ಕಾರಣಕ್ಕಾಗಿ ಈ ಕೃತ್ಯವೆಸಗಿದ್ದಾರೆ ಎಂಬುವುದು ತನಿಖೆಯಿಂದ ಇನ್ನಷ್ಟೇ ತಿಳಿಯಬೇಕಾಗಿದೆ. ಕೂಲಿ ಕಾರ್ಮಿಕರಾಗಿದ್ದ ಕಾರ್ತಿಕ್ ರವರು ತಂದೆ ನಾರಾಯಣ ಪೂಜಾರಿ, ತಾಯಿ ಬೇಬಿ , ಸಹೋದರಿ ಕವಿತಾ ಹಾಗೂ ಬಂಧುವರಗದವರನ್ನು ಅಗಲಿದ್ದಾರೆ.