ಕಾಸರಗೋಡು: ಪತಿಯ ಹೊಡೆತದಿಂದ ಪತ್ನಿ ಮೃತಪಟ್ಟ ದಾರುಣ ಘಟನೆ ಬೇಡಡ್ಕದಲ್ಲಿ ಜು.19ರ ಸೋಮವಾರ ರಾತ್ರಿ ನಡೆದಿದೆ. ಬೇಡಡ್ಕ ಕೊರತ್ತಿಕುಂಡು ಕಾಲನಿಯ ಸ್ಮಿತಾ (23) ಮೃತಪಟ್ಟವರು.
ಸೋಮವಾರ ರಾತ್ರಿ ಪತಿ ಅರುಣ್ ಕುಮಾರ್ ಈ ಕೃತ್ಯ ನಡೆದಿದ್ದು , ಹಲ್ಲೆಯಿಂದ ಗಂಭೀರ ಗಾಯಗೊಂಡ ಸ್ಮಿತಾಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ . ಅರುಣ್ ಕುಮಾರ್ ಅವರ ಮನೆಯಲ್ಲಿ ಜೋರಾದ ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದು ಸ್ಮಿತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅರುಣ್ ಕುಮಾರ್ ನನ್ನು ಬೇಡಡ್ಕ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು , ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಮಿತಾಳ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.