ಕೊರೋನಾ ಭೀತಿ ಹಿನ್ನೆಲೆ ಭಾರತದಿಂದ ಹಾರಾಟ ಮಾಡುವ ವಿಮಾನಗಳ ನಿಷೇಧವನ್ನು ಕೆನಡಾ ಆ. 21ರವರೆಗೆ ವಿಸ್ತರಿಸಿದೆ. ಕೊರೋನಾ ಸೋಂಕಿನ ನಡುವೆ ಡೆಲ್ಟಾ ರೂಪಾಂತರಿ ಕೂಡ ಹರಡುವ ಭೀತಿಯಿಂದ ಕೆನಡಾ ಪ್ರಯಾಣಿಕರ ವಿಮಾನಯಾನವನ್ನು ನಿಷೇಧಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೆನಡಾ ಆರೋಗ್ಯ ಇಲಾಖೆ, ಭಾರತದಿಂದ ಕೆನಾಡಾಕ್ಕೆ ಬರುವ ಪ್ರಯಾಣಿಕರ ಮೇಲೆ ನಿರ್ಬಂಧ ವಿಸ್ತರಿಸಿದ್ದು, ಸಾರ್ವಜನಿಕರ ಆರೋಗ್ಯ ಸಲಹೆಯ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.