ಮಂಗಳೂರು: ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ಗೆ ದಾರಿ ಬಿಟ್ಟು ಕೊಡದೆ ಕಾರು ಚಾಲಕನೊಬ್ಬ ಅಮಾನವೀಯತೆ ಮೆರೆದಿದ್ದು , ಸದ್ಯ ಕಾರು ಚಾಲಕನಿಗೆ ಪೊಲೀಸರು ಠಾಣೆಯ ದಾರಿ ತೋರಿಸಿದ್ದಾರೆ.
ಜು. 19ರ ಸೋಮವಾರ ಸಂಜೆ ದೇರಳಕಟ್ಟೆ ಕಣಚೂರು ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ತುರ್ತುಚಿಕಿತ್ಸೆಗಾಗಿ ರೋಗಿಯನ್ನು ಅಂಬುಲೆನ್ಸ್ ಮುಖಾಂತರ ಸಾಗಿಸುವ ಸಂದರ್ಭ ರಸ್ತೆಯಲ್ಲಿ ದಾರಿ ಬಿಡದೆ ಅಮಾನೀಯವಾಗಿ ವರ್ತಿಸಿ ಕಾರು ಚಾಲಕನಿಗೆ ತೊಂದರೆ ನೀಡಿದ್ದಾನೆ.
ರಸ್ತೆಯಲ್ಲಿ ಇತರ ವಾಹನಗಳು ಬದಿಗೆ ಸರಿದು ಆ್ಯಂಬುಲೆನ್ಸ್ ಗೆ ದಾರಿ ಮಾಡಿ ಕೊಡುತ್ತಿದ್ದರೂ, ಇರ್ಟಿಗಾ KA19 MJ 8924 ಕಾರಿನ ಚಾಲಕ ಅಡ್ಡಾದಿಡ್ದಿಯಾಗಿ ಚಲಿಸಿ, ಅಂಬ್ಯುಲೆನ್ಸ್ ನ ಮುಂದೆ ಮತ್ತಷ್ಟು ವೇಗವಾಗಿ ಸಾಗಿದ್ದಾನೆ . ಇದೆಲ್ಲವೂ ಅಂಬ್ಯುಲೆನ್ಸ್ ನಲ್ಲಿದ್ದವರು ಚಿತ್ರಿಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನೆಟ್ಟಿಗರು ಕಾರು ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಜು.20 ರ ಮಂಗಳವಾರ ಸಂಚಾರ ದಕ್ಷಿಣ ಪೊಲೀಸ್ ಠಾಣಾ ಪೊಲೀಸರು, ಕಾರು ಸಮೇತ ಚಾಲಕ ಉಳ್ಳಾಲ ಕುಂಪಲದ ಚರಣ್ (31) ವಶಕ್ಕೆ ಪಡೆದು ಪೊಲೀಸ್ ಠಾಣೆಯ ದಾರಿ ತೋರಿಸಿದ್ದು ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.
ಆರೋಪಿ ಕಿವಿಯಲ್ಲಿ ಇಯರ್ ಫೋನ್ ಇಟ್ಟು ಕಾರು ಚಲಾವಣೆ ನಡೆಸುತ್ತಿದ್ದ ಎಂದು ಪೊಲೀಸ್ ತನಿಖೆ ವೇಳೆ ತಿಳಿಸಿದ್ದಾನೆ.