ಮಾಣಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ ಸಿ ಟ್ರಸ್ಟ್ ವಿಟ್ಲ ,ಮಾಣಿ ವಲಯದ ಪ್ರಾಯೋಜಕತ್ವದಲ್ಲಿ ಯೋಜನೆಯ ಪಾಲುದಾರ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ ಇಡ್ಕಿದು ಗ್ರಾಮ ಪಂಚಾಯತ್ ಸಭಾ ಭವನ ದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಡ್ಕಿದು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ರವರು ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಜನಜಾಗೃತಿ ವೇದಿಕೆ ಸದಸ್ಯರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ರವರು ನೆರವೇರಿಸಿ ಪೂಜ್ಯ ಖಾವಂದರು ಕಲ್ಪಿಸಿದ ಉಳಿತಾಯ ಯೋಜನೆಯಲ್ಲಿ ಸಾಲ ಪಡೆದು ಲಾಭಂಶ ಪಡೆದು ಕೊಳ್ಳುವ ಹಂತದಲ್ಲಿದ್ದೇವೆ , ಯಾವುದೇ ಕಷ್ಟಕರ ಇಲ್ಲದೆ ಸುಲಭ ರೀತಿಯಲ್ಲಿ ಸಿಗುವ ಇಂಥಹ. ಸೌಲಭ್ಯ ಗಳನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ವಿಟ್ಲ ತಾಲೂಕಿನ ಯೋಜನಾಧಿಕಾರಿ ಚೆನ್ನಪ್ಪ ಗೌಡ ಮಾತನಾಡಿ ಯೋಜನೆ ಹೆಮ್ಮರವಾಗಿ ಬೆಳೆದು ಬಂದ ರೀತಿ ಪೂಜ್ಯರ ಆಶಯಗಳನ್ನು ಹೇಗೆ ಸದ್ಬಳಕೆ ಮಾಡಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ಮಾಣಿ ವಲಯದ ವಲಯಧ್ಯಕ್ಷ ತನಿಯಪ್ಪ ಗೌಡ, ಅಳಕೆಮಜಲು ಒಕ್ಕೂಟದ ಅಧ್ಯಕ್ಷ , ತಿರುಮಲೇಶ್ವರ, ಆಂತರಿಕ ಲೆಕ್ಕ ಪರಿಶೋಧಕರಾದ ಶ್ರೀಮತಿ ಯಶೋಧ, ಸೇವಾಪ್ರತಿನಿಧಿ ಯೋಗಿತ, ಒಕ್ಕೂಟದ ಪದಾದಿಕಾರಿಗಳು ಉಪಸ್ಥಿತರಿದ್ದರು.
ಇಡ್ಕಿದು ಸೇವಾಪ್ರತಿನಿಧಿ ದಿವ್ಯರವರು ಸ್ವಾಗತಿಸಿದರು. ಅಳಕೆಮಜಲು ಸೇವಾಪ್ರತಿನಿಧಿ ಸುಗಂಧಿನಿ ವಂದಿಸಿದರು. ಮಾಣಿ ವಲಯ ಮೇಲ್ವಿಚಾರಕಿ ಶ್ರೀಮತಿ ಪ್ರೇಮಾ ರವರು ಕಾರ್ಯಕ್ರಮ ನಿರೂಪಿಸಿದರು.