ಪುತ್ತೂರು : ತಿಂಗಳಾಡಿ ಶಾಲಾ ವಠಾರದಲ್ಲಿ ‘ಸ್ವಚ್ಛ ಭಾರತ್’ ಅಂಗವಾಗಿ ಶ್ರೀವಿಷ್ಣು ಯುವ ಶಕ್ತಿ ಬಳಗ(ರಿ) ಮಜ್ಜಾರಡ್ಕ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವೂ ಜು.20 ರಂದು ನಡೆಯಿತು.
ಶ್ರಮ, ಸೇವೆ, ಸಹಾಯ ಎಂಬ ಧ್ಯೇಯದೊಂದಿಗೆ ಸಂಘಟನೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಹಿರಿಯರನ್ನು, ಕಿರಿಯರನ್ನು ಒಳಗೊಂಡ ಸಂಘಟನೆ ಪುತ್ತೂರು ತಾಲೂಕಿನಲ್ಲಿ ‘ಮಜ್ಜಾರಡ್ಕ’ ಎಂಬ ಹೆಸರನ್ನು ಒಳ್ಳೆ ಕೆಲಸಕಾರ್ಯಗಳನ್ನು ಮಾಡುತ್ತಾ ಇತಿಹಾಸ ಪುಟ ಸೇರುವಂತೆ ಮಾಡಿದೆ.
ಶ್ರಮದಾನ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ರವಿ, ಉಪಾಧ್ಯಕ್ಷ ಪುರುಷೋತ್ತಮ,ಕಾರ್ಯದರ್ಶಿ ಸದಾಶಿವ ಮಣಿಯಾಣಿ, ಜೊತೆಕಾರ್ಯದರ್ಶಿ ವಿನೋದ್,ಸಂಘಟಕ ರಾಜೇಶ್ ಮಯೂರ ಗೋಳ್ತಿಲ, ಸದಸ್ಯರಾದ ಜನಾರ್ಧನ, ನವೀನ್, ರವಿ ಅಜಿಲ, ಸಮಿತ್, ನವೀನ್ ಕುಮಾರ್, ಉದಯ್, ಚೇತನ್, ಲೋಕೇಶ್, ಹರೀಶ್, ಯೋಗೀಶ್, ಕೃತಿಕ್ ಗೋಳ್ತಿಲ, ಕೃಷ್ಣಪ್ಪ, ಪ್ರತೀಕ್,ಆಧ್ಯ ಆರ್.ಜೆ ಗೋಳ್ತಿಲ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಕೃಷ್ಣಪ್ಪ ತಿಂಗಳಾಡಿ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ರಘುನಾಥ ಗೋಳ್ತಿಲ ಪೂರೈಸಿದ್ದು, ತಿಂಗಳಾಡಿ ಶಾಲಾ ಶಿಕ್ಷಕರು ಧನ್ಯವಾದ ಸಮರ್ಪಿಸಿದರು. ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಸುಂದರ ತಿಂಗಳಾಡಿ ಸಹಕರಿಸಿ,ಅಭಿನಂದಿಸಿದರು.