ಬಂಟ್ವಾಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜ್ಯೋತಿ ಸಂಘ ಇದರ ಸಹಕಾರದೊಂದಿಗೆ ಅಲೆತ್ತೂರು ಗ್ರಾಮದ ಲೋಕೇಶ್ ಸುವರ್ಣರವರ ಮನೆಯ ಗದ್ದೆಯಲ್ಲಿ ನಾಟಿ ನೆಡುವ ಕಾರ್ಯಕ್ರಮಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್,ಮಾಜಿ ಬೂಡ ಅಧ್ಯಕ್ಷರಾದ ಸದಾಶಿವ ಬಂಗೇರ,ಯುವ ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಕುಲಾಲ್, ಪಾಣೆಮಂಗಳೂರು ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಉಮೇಶ್ ನೆಲ್ಲಿಗುಡ್ಡೆ, ಪಾಣೆಮಂಗಳೂರು ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷರಾದ ಸೋಮಶೇಖರ್ ಗೌಡ ,ಹಿಮಕರ ಪೂಜಾರಿ, ಶಶಿಧರ್ ಕುಲಾಲ್, ದಿವಾಕರ, ಮನೋಹರ ಕುಲಾಲ್ ನೆರಂಬೋಲ್,ಪ್ರಕಾಶ್ ಡಿ’ಕ್ರೋಸ್ ಕ್ಲೇರ,ರಹೀಮ್ ಕೈಕುಂಜೆ ,ಫ್ರಾನ್ಸಿಸ್ ಮೊದಲಾದವರು ಉಪಸ್ಥಿತರಿದ್ದರು.