ಬೆಳ್ತಂಗಡಿ: ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ವತಿಯಿಂದ ಗುರುದೇವ ಪದವಿ ಕಾಲೇಜು ಬೆಳ್ತಂಗಡಿಯ ವಿದ್ಯಾರ್ಥಿನಿ ಗರ್ಡಾಡಿ ನಿವಾಸಿ ಸುಷ್ಮಾಳ ಶೈಕ್ಷಣಿಕ ವೆಚ್ಚವನ್ನು ಟ್ರಸ್ಟ್ ಅಧ್ಯಕ್ಷರಾದ ಮಾಜಿ ಶಾಸಕ ವಸಂತ ಬಂಗೇರ ರವರಿಗೆ ಹಸ್ತಾಂತರಿಸಲಾಯಿತು. ಯುವವಾಹಿನಿ ಬೆಳ್ತಂಗಡಿ ಘಟಕವು ಈಗಾಗಲೇ ಹಲವಾರು ವಿದ್ಯಾರ್ಥಿಗಳನ್ನು ದತ್ತು ಪಡೆದು ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.
ಶುಲ್ಕ ಹಸ್ತಾಂತರ ಸಂದರ್ಭದಲ್ಲಿ ಯುವವಾಹಿನಿ(ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಎಂ ಕೆ ಪ್ರಸಾದ್, ಗೌರವ ಸಲಹೆಗಾರರಾದ ರಮಾನಂದ ಸಾಲಿಯಾನ್ ಮುಂಡೂರು,ಮಾಜಿ ಅಧ್ಯಕ್ಷರಾದ ರಾಕೇಶ್ ಮೂಡುಕೋಡಿ,ನಿಯೋಜಿತ ಅಧ್ಯಕ್ಷರಾದ ಸುಜಾತ ಅಣ್ಣಿ ಪೂಜಾರಿ,ಸಲಹೆಗಾರರಾದ ಅಶ್ವಥ್ ಕುಮಾರ್,ಮಹಿಳಾ ಸಂಚಾಲನ ಸಮಿತಿಯ ಶಾರದ ಗರ್ಡಾಡಿ,ವಿಧ್ಯಾರ್ಥಿನಿಯ ಹೆತ್ತವರಾದ ಸುನಂದ ಮುಂತಾದವರು ಉಪಸ್ಥಿತರಿದ್ದರು.