ಪುತ್ತೂರು: ತಾಲೂಕು ಅಹಿಂದದ ಕಾರ್ಯದರ್ಶಿ, ದಲಿತ ಮುಖಂಡ ಶಿವಪ್ಪ ಆಟ್ಟೋಳೆ ಯವರು, ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.23 ರಂದು ರಾತ್ರಿ ನಿಧನರಾದರು.
ಶಿವಪ್ಪ ರವರು ದಕ್ಷಿಣ ಕನ್ನಡ ಜಿಲ್ಲಾ ಬಹುಜನ ಸಮಾಜ ಪರಿವರ್ತನಾ ವೇದಿಕೆಯ ಜಿಲ್ಲಾ ಉಸ್ತುವಾರಿ ಆಗಿದ್ದು, ಉಳ್ಳಾಲ ನಗರಸಭೆಯಲ್ಲಿ ಪೌರಕಾರ್ಮಿಕರಾಗಿರುತ್ತಾರೆ. ಈ ಹಿಂದೆ ಪುತ್ತೂರಿನ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸಿರುತ್ತಾರೆ.
ಅಂತಿಮ ದರ್ಶನ ನಾಳೆ ಸವಣೂರಿನ ಅವರ ಮನೆಯಲ್ಲಿ ,ಮಧ್ಯಾಹ್ನ 12:00 ರ ನಂತರ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.